ಶನಿವಾರಸಂತೆ, ಫೆ. 13: ಪಟ್ಟಣದ ಬ್ರೈಟ್ ಅಕಾಡೆಮಿ ಹೇಮಾ ವಿದ್ಯಾಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವ ಬ್ರೈಟ್ ಬ್ಲಿಸ್ಟರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪತ್ರಕರ್ತೆ ನಯನತಾರಾ ಪಾಲ್ಗೊಂಡು ಮಾತನಾಡಿದರು.
ಅನುಕರಣೆ ಮಗುವಿನ ಪ್ರಥಮ ಶಿಕ್ಷಣ ವಿಧಾನವಾಗಿದ್ದು, ಕುಟುಂಬದ ಹಿರಿಯರ ನಡೆ-ನುಡಿಗಳನ್ನು ಸೂಕ್ಷ್ಮವಾಗಿ ಗಮನಿಸಿ ತಾನೂ ಅವರಂತೆ ಆಗಲು ಪ್ರಯತ್ನಿಸುತ್ತದೆ. ಮಗುವಿನ ವಿದ್ಯಾಭ್ಯಾಸದ 2ನೇ ಹಂತದ ಆರಂಭ ಶಾಲೆಗಳಲ್ಲಿ ಆಗಲಿದ್ದು, ಶಿಕ್ಷಣದ ಜತೆ ಉತ್ತಮ ಸಂಸ್ಕಾರ, ಸಂಸ್ಕøತಿ ಕಲಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ, ಶಿಕ್ಷಕರು ಮಕ್ಕಳ ಆಸಕ್ತಿ ಗುರುತಿಸಿ ವಿದ್ಯೆ ಕಲಿಸಬೇಕು ಎಂದರು. ಶಿಕ್ಷಕ ಜಯಕುಮಾರ್ ಮಾತಮಾಡಿ, ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವಲ್ಲಿ ಶಿಕ್ಷಕರೊಂದಿಗೆ ಪೋಷಕರ ಜವಾಬ್ದಾರಿಯೂ ಮಹತ್ವದಾಗಿದೆ ಎಂದರು.
ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಪೋಷಕರಿಗೆ ಬಹುಮಾನ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಜೆ. ಪರಮೇಶ್ ಮಾತನಾಡಿ, ಸಮಗ್ರ ಶಿಕ್ಷಣದಿಂದ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ರುಕ್ಮಿಣಿ, ನಿರ್ದೇಶಕಿ ಸೀತಮ್ಮ, ಮುಖ್ಯ ಶಿಕ್ಷಕ ಲಾಂಛನ್ ಕರೆಕರ್, ಎಂ.ಎ. ಸಮೀರ್, ಸಂಪನ್ಮೂಲ ವ್ಯಕ್ತಿ ಜಾನ್‍ಪಾಲ್ ಡಿಸೋಜ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸಿ.ಎಸ್. ಸತೀಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸರ್ದಾರ್ ಅಹಮ್ಮದ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ, ಇಸಿಒ ಹೆಚ್.ಆರ್. ಶೇಖರ್, ಗೀತಾ ಹರೀಶ್, ಶಿಕ್ಷಕಿಯರಾದ ಕವನ, ಪವಿತ್ರ, ಸಂಗೀತ, ರುಚಿತ ಉಪಸ್ಥಿತರಿದ್ದರು.