*ಗೋಣಿಕೊಪ್ಪಲು, ಫೆ. 13: ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿ ನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಚೆಪ್ಪುಡೀರ ಎಂ. ಅಪ್ಪಯ್ಯ, ಉಪಾಧ್ಯಕ್ಷರಾಗಿ ಜಂಗಮರ ಎಸ್. ಲೋಕೇಶ್ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಂದಿನ 5 ವರ್ಷಗಳ ಅವಧಿಗೆ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ನಿರ್ದೇಶಕರುಗಳಾದ ಆಪಟ್ಟೀರ ಎ. ಬೋಪಣ್ಣ, ಆಪಟ್ಟೀರ ಎಸ್. ನಾಚಯ್ಯ, ನಾಮೇರ ಸಿ. ವಿಶ್ವನಾಥ್, ಕಾಳಪಂಡ ಎ. ಸತೀಶ್, ಸಣ್ಣುವಂಡ ಎ. ಗುಣ, ಕುಂಬಾರರ ಆರ್. ಶ್ರೀನಿವಾಸ್, ನಾಮದಾರಿ ಆರ್. ಪ್ರವೀಣ್, ಚೆಪ್ಪುಡೀರ ಎನ್. ಅಪ್ಪಣ್ಣ, ಮಲ್ಲೇಂಗಡ ಪಿ. ಮುತ್ತಮ್ಮ, ಹರಿಜನರ ಡಿ. ರಮೇಶ್, ಪಂಜರಿ ಯರವರ ಪಿ. ಅಪ್ಪಣ್ಣ, ಚುನಾವಣಾ ಅಧಿಕಾರಿ ಕರಣ್ ಕಾಯಪ್ಪ ಸೇರಿದಂತೆ ಸಿಬ್ಬಂದಿ ವರ್ಗ, ಕಾರ್ಯನಿರ್ವಹಣಾಧಿಕಾರಿ ಹಾಜರಿದ್ದರು.