ಕುಶಾಲನಗರ, ಫೆ. 12: ಪ್ರಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿ ಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಹೇಳಿದರು.

ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಾರ್ಷಿಕ ಎನ್ನೆಸ್ಸೆಸ್ ಶಿಬಿರದಲ್ಲಿ ಪಾಲ್ಗೊಂಡು ಕಾವೇರಿ ನದಿ ಸಂರಕ್ಷಣೆಯಲ್ಲಿ ಯುವ ಜನತೆ ಪಾತ್ರ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ನದಿ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಪರಿಸರವನ್ನು ಕಲುಷಿತ ಗೊಳಿಸುವ ವಸ್ತುಗಳನ್ನು ತ್ಯಜಿಸುವುದರೊಂದಿಗೆ ಇತರರಲ್ಲಿ ಕೂಡ ಜಾಗೃತಿ ಮೂಡಿಸಬೇಕಿದೆ ಎಂದರು.

ವಿದ್ಯಾರ್ಥಿಗಳು ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ. ವಿದ್ಯಾಭ್ಯಾಸದ ನಡುವೆ ಬಿಡುವು ಸಿಕ್ಕಾಗ ಸಮಾಜಮುಖಿಯಾದ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಎನ್ನೆಸ್ಸೆಸ್ ಶಿಬಿರಗಳು ಸಾಮಾಜಿಕ ವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ವೇದಿಕೆಯಾಗಿದ್ದು ಶಿಬಿರದ ಸದುಪ ಯೋಗವನ್ನು ಪಡೆದು ಕೊಳ್ಳಬೇಕೆಂದರು. ಉಪನ್ಯಾಸಕ ವಿನಯ್ ಮಾತನಾಡಿ, ಸರಳ ಜೀವನ ಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟುವ ಅವಕಾಶಗಳಿವೆ. ಮನೆಯಿಂದಲೇ ಕೈಚೀಲಗಳನ್ನು ಕೊಂಡೊಯ್ಯವ ಮೂಲಕ ಪ್ಲಾಸ್ಟಿಕ್ ಚೀಲಗಳನ್ನು ಅವಲಂಬಿಸುವುದನ್ನು ಕೈಬಿಡಬೇಕಾಗಿದೆ ಎಂದರು.

ಉಪನ್ಯಾಸಕ ಬಿ.ಸಿ. ಯೋಗಾನಂದ ಮಾತನಾಡಿ, ಪೆÇೀಷಕರ ಕನಸನ್ನು ಸಾಕಾರ ಗೊಳಿಸಲು ವಿದ್ಯಾರ್ಥಿಗಳು ಶ್ರಮವಹಿಸಬೇಕಿದೆ. ಶಿಕ್ಷಣದೊಂದಿಗೆ ಸ್ವಂತಿಕೆ ಬೆಳೆಸಿಕೊಂಡಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದರು.

ಕಾಲೇಜಿನ ಉಪನ್ಯಾಸಕ ರೂಪಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲೋಕೇಶ್, ಪ್ರದೀಪ್, ಶಿಬಿರಾಧಿಕಾರಿ ಅಸ್ಮತ್ ಇದ್ದರು. ನಂತರ ಉಪ ಪ್ರಾಂಶುಪಾಲ ಕುಮಾರ್ ವಿದ್ಯಾರ್ಥಿಗಳೊಂದಿಗೆ ಜೀವನಶೈಲಿ ಬಗ್ಗೆ ಸಂವಾದ ಕಾರ್ಯಕ್ರಮ ನಡೆಸಿದರು.

ಶಿಬಿರಾರ್ಥಿ ಮನೀಶ್ ಶಿಬಿರದ ದಿನಚರಿ ಓದಿದರು. ದರ್ಶನ್ ತಂಡ ಪ್ರಾರ್ಥಿಸಿ, ಚಂದನ್ ಸ್ವಾಗತಿಸಿದರು.