*ಗೋಣಿಕೊಪ್ಪಲು, ಫೆ. 13: ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1 ಕೋಟಿ 2 ಲಕ್ಷ ಅನುದಾನದ ರಸ್ತೆ ಅಭಿವೃದ್ಧಿ ಮತ್ತು ಅಂಗನವಾಡಿ ಕಟ್ಟಡ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ಹೆಬ್ಬಾಲೆ ಪಟ್ಟಣ ರಸ್ತೆ, ಹೆಬ್ಬಾಲೆ ಅಯ್ಯಪ್ಪ ಭದ್ರಕಾಳಿ ದೇವಸ್ಥಾನ ಸಂಪರ್ಕ ರಸ್ತೆ ಮತ್ತು ಕಮಟೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. 18 ಲಕ್ಷ ಅನುದಾನದಲ್ಲಿ ಹೆಬ್ಬಾಲೆ ಪಟ್ಟಣ ರಸ್ತೆ, 5 ಲಕ್ಷ ಕನ್ನಂಬಾಡಿ ಕಳ್ಳಿಚಂಡ ರಸ್ತೆ, 30 ಲಕ್ಷದಲ್ಲಿ ಕಮಟೆ ರಸ್ತೆ, 5 ಲಕ್ಷ ಭದ್ರಕಾಳಿ ದೇವಸ್ಥಾನ ರಸ್ತೆ, 4 ಲಕ್ಷ ಅಯ್ಯಪ್ಪ ದೇವಸ್ಥಾನ ಸಂಪರ್ಕ ರಸ್ತೆ, ಐದು ಲಕ್ಷ ನೆಹರು ಕಾಲೋನಿ ರಸ್ತೆ ಅಭಿವೃದ್ದಿ, 5 ಲಕ್ಷ ಗಿರಿಜನ ರೇಷ್ಮೆ ಹಡ್ಲು ಸಂಪರ್ಕ ರಸ್ತೆ, 5 ಲಕ್ಷ ಗಿರಿಜನ ಕಾಲೋನಿ, 5 ಲಕ್ಷ ಪರಿಶಿಷ್ಟ ಪಂಗಡ ಅಕ್ಕಿಮಾಳ ಮುಖ್ಯ ರಸ್ತೆ, ಕಾರೆಹಡ್ಲು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ, ದೇವಮಚ್ಚಿ ಕಾರೆಹಡ್ಲು ಕಾಂಕ್ರೀಟ್ ರಸ್ತೆಗೆ 5 ಲಕ್ಷ, ರೇಷ್ಮೆಹಡ್ಲುವಿಗೆ ಹೋಗುವ ಸಂಪರ್ಕ ರಸ್ತೆ 5 ಲಕ್ಷ ವೆಚ್ಚದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಶಾಸಕರು ಚಾಲನೆ ನೀಡಿದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ವರ್ತಕರ ಪ್ರಕೋಷ್ಟ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಇ.ಸಿ. ಜೀವನ್, ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಎನ್.ಎನ್. ಅನೂಪ್‍ಕುಮಾರ್, ದೇವರಪುರ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವಾಸು, ಕಿರಣ್‍ಕುಮಾರ್, ಹಿರಿಯರಾದ ಚಕ್ಕೇರ ಸೊಮಯ್ಯ, ದೇವರಪುರ ಗ್ರಾಮದ ಬಿಜೆಪಿ ಪ್ರಮುಖರಾದ ಮನೆಯಪಂಡ ಮಹೇಶ್, ಕಾಣತಂಡ ನವೀನ್, ಮನೆಯಪಂಡ ಬಿಪಿನ್, ಮನೆಯಪಂಡ ಬೋಪಣ್ಣ, ಮನೆಯಪಂಡ ಸಚಿನ್, ನಿರಂಜನ್, ರಾಜ್‍ಕುಮಾರ್, ಟಿ.ಸಿ. ಮಹೇಶ್, ಚಕ್ಕೇರ ತಮ್ಮಯ್ಯ, ಕಳ್ಳಿಚಂಡ ರಮೇಶ್, ಸಾಬು, ಬೆಳ್ಳಿಕಟ್ಟಿ, ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗೋವಿಂದ, ಇಂಜಿನಿಯರ್‍ಗಳಾದ ಮಹಾದೇವ್, ಸಣ್ಣುವಂಡ ನವೀನ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ನರಸಿಂಹ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.