ಶನಿವಾರಸಂತೆ, ಫೆ. 12: ಹಂಡ್ಲಿ ಗ್ರಾಮ ಪಂಚಾಯಿತಿಯ ಸರಕಾರಿ ಪ್ರಾಥಮಿಕ ಶಾಲಾ ಮೇಲ್ಛಾವಣಿ ದುರಸ್ತಿಗೆ ತಾಲೂಕು ಪಂಚಾಯಿತಿ ಸದಸ್ಯ ಕುಶಾಲಪ್ಪ ತಮ್ಮ ಅನುದಾನದ ರೂ. 2.18 ಲಕ್ಷ ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಿದರು.

ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಅಧ್ಯಕ್ಷ ಲೋಕೇಶ್ ವಹಿಸಿದ್ದರು. ಮಾಜಿ ತಾ.ಪಂ. ಸದಸ್ಯ ಎಸ್.ಕೆ. ವೀರಪ್ಪ, ಮಾಜಿ ಸೈನಿಕ ಕೆ.ವಿ. ಮಂಜುನಾಥ್, ವಿ.ಎಸ್.ಎಸ್.ಎನ್. ಅಧ್ಯಕ್ಷ ವೀರೇಂದ್ರ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ನಿರ್ಮಲ, ಕಾರ್ಯದರ್ಶಿ ರವಿ, ಶಿಕ್ಷಕಿ ಸುಮ, ಅಂಗನವಾಡಿ ಶಿಕ್ಷಕಿ ಮೋಹನಾಕ್ಷಿ, ಮುಖ್ಯ ಶಿಕ್ಷಕಿ ಸುಶೀಲಮ್ಮ, ಗ್ರಾಮಸ್ಥರಾದ ಸಂಗಮೇಶ್, ರವಿಶಂಕರ್, ಮಂಜುನಾಥ್, ಶಾಂತಮಲ್ಲಪ್ಪ, ಮನು ಇತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸುಶೀಲಮ್ಮ ಸ್ವಾಗತಿಸಿ, ಶಿಕ್ಷಕ ಮಹೇಶ್ ಕುಮಾರ್ ನಿರೂಪಿಸಿ, ವಂದಿಸಿದರು.