ಶನಿವಾರಸಂತೆ, ಫೆ. 12: ಪಟ್ಟಣದ ಕ್ರೀಡಾಪಟು ಹೆಚ್.ಎನ್. ಚರಣ್ ಮತ್ತು ತಂಡದವರು ಮುಂಬೈನ್ ನಾಸಿಕ್‍ನಲ್ಲಿ ನಡೆದ ರಾಷ್ಟ್ರೀಯ ಫುಟ್‍ಬಾಲ್ ಟೂರ್ನಿ(ಐಆರ್‍ಎಫ್‍ಎಲ್)ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ತಂಡದ ನಾಯಕ ಹೆಚ್.ಎನ್. ಚರಣ್ ಟೂರ್ನಿಯ ಉತ್ತಮ ರಾಷ್ಟ್ರೀಯ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದು, 18 ವರ್ಷದೊಳಗಿನ ಆಟಗಾರರ ಆಯ್ಕೆ ಪಟ್ಟಿಯಲ್ಲಿ ಇರುತ್ತಾರೆ. ಈ ಟೂರ್ನಿಯ ತಂಡದಲ್ಲಿ ಸ್ಥಳೀಯ ಸೆಕ್ರೇಡ್ ಹಾರ್ಟ್ ವಿದ್ಯಾರ್ಥಿಗಳಾದ ಟಿ.ಡಿ. ನಿಶಾಂತ್, ಶಶಾಂಕ್, ನಿತಿನ್, ರೂಪೇಶ್, ನಿಶಾಂತ್ ಪಾಲ್ಗೊಂಡಿದ್ದರು. ಎಸ್.ಎ. ಶಾಹಿಬ್ ತಂಡದ ಕೋಚ್ ಆಗಿದ್ದರು.