ಮಡಿಕೇರಿ, ಫೆ. 12: ಮಡಿಕೇರಿಯ “ಕೂರ್ಗ್ ಪಾತ್ ಕೇರ್” ವತಿಯಿಂದ ನಗರದ ಆಟೋ ಚಾಲಕರು-ಮಾಲೀಕರಿಗೆ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬುಧವಾರ ಏರ್ಪಡಿಸಲಾಗಿತ್ತು. ಉದ್ಘಾಟನೆ ಯನ್ನು “ಶಕ್ತಿ” ಪ್ರಧಾನ ಸಂಪಾದಕ ಜಿ. ರಾಜೇಂದ್ರ ನೆರವೇರಿಸಿದರು. ಆಟೋ ಚಾಲಕರು ಹಾಗೂ ಮಾಲೀಕರು ಕೂಡ ಸಮಾಜದ ಆಗು ಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಿತ್ಯ ಜಂಝಾಟದ ನಡುವೆ ಅವರ ಆರೋಗ್ಯವು ಅವರÀ ಅವಲಂಬಿತರಿಗೆ, ಸಮಾಜಕ್ಕೆ ಮುಖ್ಯವಾಗಿದೆ. ಈ ದಿಸೆÀಯಲ್ಲಿ ಅವರಿಗೇ ಪ್ರತ್ಯೇಕವಾಗಿ ಇಂತಹ ಶಿಬಿರ ಏರ್ಪಡಿಸಿರುವದು ಸ್ವಾಗತಾರ್ಹ ಎಂದು ರಾಜೇಂದ್ರ ಅಭಿಪ್ರಾಯಪಟ್ಟರು.

ಈ ಕೇಂದ್ರದ ಪ್ರಮುಖ ವೈದ್ಯರಾದ ಡಾ. ಸತೀಶ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಕುಟುಂಬ ವರ್ಗದವರಿಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಿರುವದಾಗಿ ತಿಳಿಸಿದರು.

ಈ ಶಿಬಿರ ನಿರ್ವಾಹಕರಾದ ಡಾ. ಶಿಲ್ಪಾ ಸತೀಶ್, ಚಿಕಿತ್ಸಾ ಕೇಂದ್ರದ ಹರೀಶ್, ಸೋಮಶೇಖರ್, ಆಟೋ ಚಾಲಕರ ಸಂಘÀದ ಪ್ರಮುಖರಾದ ಸುಲೇಮಾನ್, ಗಣೇಶ್, ಮತ್ತಿತರ ಆಟೋ ಚಾಲಕರು ಹಾಜರಿದ್ದರು. ಚಿಕಿತ್ಸಾ ಕೇಂದ್ರದ ಪ್ರದೀಪ್ ಕುಮಾರ್ ಸ್ವಾಗತಿಸಿದರು.