ಮಡಿಕೇರಿ, ಫೆ.10: ಬೋಡೋಲ್ಯಾಂಡ್ ಒಪ್ಪಂದದ ಜೊತೆಯಲ್ಲೇ ಕೊಡವ ಲ್ಯಾಂಡ್ ಅಟೋನಮಿ/ಸ್ವಾಯತ್ತತೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ. ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಮಂತ್ರಿಗಳು ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಸುಬ್ರಮಣ್ಯನ್ ಸ್ವಾಮಿ ಅವರಿಗೆ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಈ ಬೇಡಿಕೆಯ ಬಗ್ಗೆ ಪತ್ರ ರವಾನಿಸಿದ್ದಾರೆ.

ಬೋಡೋಲ್ಯಾಂಡ್ ಸ್ವಾಯತ್ತತೆಯೊಂದಿಗೆ ಅವರ ಸಂಸ್ಕøತಿ, ಹೆಗ್ಗುರುತು, ಭಾಷೆ ರಕ್ಷಣೆಯು ಸೇರಿದಂತೆ ಆ ಪ್ರದೇಶದ ರಾಜಕೀಯ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಒತ್ತು ನೀಡಲಿರುವ ಕೇಂದ್ರ ಸರ್ಕಾರ ಕೊಡಗಿನ ಬುಡಕಟ್ಟು ಸಮುದಾಯವಾದ ಕೊಡವರ ಆಶೋತ್ತರವಾದ ಕೊಡವ ಲ್ಯಾಂಡ್ ಭೂ- ರಾಜಕೀಯ ಹಕ್ಕೊತ್ತಾಯವನ್ನೂ ಪರಿಗಣಿಸಬೇಕೆಂದು ನಾಚಪ್ಪ ಒತ್ತಾಯಿಸಿದ್ದಾರೆ.