ವೀರಾಜಪೇಟೆ, ಫೆ.10: 225 ವರ್ಷಗಳ ಇತಿಹಾಸವುಳ್ಳ ಪ್ರಸಿದ್ಧ ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ವಾರ್ಷಿಕೋತ್ಸವ ತಾ. 12 ರಂದು ನಡೆಯಲಿದೆ.

ತಾ. 12 ರಂದು ಸಂಜೆ 5 ಗಂಟೆಗೆ ದಿವ್ಯಬಲಿ ಪೂಜೆಯನ್ನು ಮೈಸೂರು ಧರ್ಮಕ್ಷೇತ್ರದ ಶ್ರೇಷ್ಠ ಗುರುಗಳಾದ ಫಾ.ಸಿ. ರಾಯಪ್ಪ ಸಹಾಯಕ ಧರ್ಮಗುರುಗಳ ನೇತೃತ್ವದಲ್ಲಿ ನೆರವೇರಿಸಲಿದ್ದಾರೆ. ತದನಂತರ 6.30 ಗಂಟೆಗೆ ಸಂತ ಅನ್ನಮ್ಮ ದೇವರ ಮೂರ್ತಿಯನ್ನು ಮೇಣದಬತ್ತಿಯೊಂದಿಗೆ ವೀರಾಜಪೇಟೆ ನಗರದಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತದೆ. ನೇತೃತ್ವವನ್ನು ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರುಗಳಾದ ರೆ.ಫಾ. ಮದಲೈ ಮುತ್ತು ವಹಿಸಲಿದ್ದಾರೆ.