ಶನಿವಾರಸಂತೆ, ಫೆ. 10: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧೆಡೆಯ ರಸ್ತೆಗಳ ದುರಸ್ತಿ, ಡಾಂಬರೀಕರಣ ಹಾಗೂ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೂಮಿ ಪೂಜೆ ನೆರವೇರಿಸಿದರು.

ಶಾಸಕರ ಅನುದಾನ ರೂ. 1 ಕೋಟಿ 38 ಲಕ್ಷ ವೆಚ್ಚದಲ್ಲಿ ಶನಿವಾರಸಂತೆಯ ಬೈಪಾಸ್ ರಸ್ತೆ ದೇವಸ್ಥಾನ ರಸ್ತೆ, ಪೊಲೀಸ್ ಠಾಣೆ ರಸ್ತೆ, ತ್ಯಾಗರಾಜ ಕಾಲೋನಿ ಸಮುದಾಯ ಭವನದಿಂದ ಸುಳುಗಳಲೆ ದೇವಸ್ಥಾನಕ್ಕೆ ತೆರಳುವ ರಸ್ತೆ, ಗುಂಡೂರಾವ್ ಬಡಾವಣೆಯ ರಸ್ತೆಗಳ ದುರಸ್ತಿ, ಡಾಂಬರೀಕರಣ ಹಾಗೂ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿ ನಡೆಯಲಿದೆ.

ಈ ಸಂದರ್ಭ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ರಸ್ತೆಗಳು ದುರಸ್ತಿಯೊಂದಿಗೆ ಡಾಂಬರೀಕರಣ ಗೊಳ್ಳಲಿವೆ. ಕೊಡ್ಲಿಪೇಟೆ ಹಾಗೂ ಶನಿವಾರಸಂತೆಯಲ್ಲಿ ತಲಾ ರೂ. 50 ಲಕ್ಷ ವೆಚ್ಚದಲ್ಲಿ 2 ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ವಾಗಲಿವೆ. ಸಮುದಾಯ ಭವನದಲ್ಲಿ ವಿವಿಧ ಉತ್ತಮ ಶುಭ ಕಾರ್ಯಕ್ರಮಗಳು ನಡೆಯಲಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೆಸರು ಉಳಿಯುವಂತಾಗಲಿ ಎಂದರು.

ಜನಪ್ರತಿನಿಧಿಗಳಾದ ಮನುರೈ, ಸಿ.ಪಿ. ಪುಟ್ಟರಾಜ್, ಸರೋಜಮ್ಮ, ಕುಶಾಲಪ್ಪ, ಲೀಲಾವತಿ, ಮಹಮ್ಮದ್ ಗೌಸ್, ಸರ್ದಾರ್ ಅಹಮ್ಮದ್, ಆದಿತ್ಯ ಗೌಡ, ಹರೀಶ್ ಕುಮಾರ್, ಗೀತಾ, ಸೌಭಾಗ್ಯಲಕ್ಷ್ಮಿ, ಉಷಾ, ರಜನಿ, ಮುಖಂಡರಾದ ಎಸ್. ಮಹೇಶ್, ಎಸ್.ಎನ್. ರಘು, ಯತೀಶ್, ಎಚ್.ಬಿ. ಜಯಮ್ಮ, ರವಿ ಇತರ ಕಾರ್ಯಕರ್ತರು ಹಾಜರಿದ್ದರು.