ಮಡಿಕೇರಿ, ಫೆ. 10 : ಮೇಕೇರಿ ಗ್ರಾಮದ ಶ್ರೀ ಗೌರಿಶಂಕರ ದೇವಾಲಯದಲ್ಲಿ ತಾ. 13 ರಿಂದ 22ರ ವರೆಗೆ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ.

ತಾ.13 ರಂದು ಬೆಳಗ್ಗೆ 7 ಗಂಟೆಗೆ ಉತ್ಸವ ಪ್ರಾರಂಭವಾಗಲಿದ್ದು, ಬೆಳಗ್ಗೆ 9.30ಕ್ಕೆ ಧ್ವಜಾರೋಹಣ ನೆರವೇರಲಿದೆ. ಸಂಜೆ 6.30ಕ್ಕೆ ಸಂಗೀತಾರ್ಚನೆಯನ್ನು ಏರ್ಪಡಿಸಲಾಗಿದೆ. ಶಿವರಾತ್ರಿ ಪ್ರಯುಕ್ತ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.

ಕೊನೆಯ ದಿನವಾದ ಫೆ.22 ರಂದು ಶಿವಾರ್ಚನಾ ಸೇವೆಗಳು ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ನೈರ್ಮಲ್ಯ ಪೂಜೆ, 8 ಗಂಟೆಗೆ ನವಕಲಶ ಪೂಜೆ, 10 ರಿಂದ ರುದ್ರಾಭಿಷೇಕ, ಪೂರ್ವಾಹ್ನ 11 ಗಂಟೆಗೆ ಪುತ್ತೂರಿನ ಖ್ಯಾತ ವಾಗ್ನಿ ಶ್ರೀಕೃಷ್ಣ ಉಪಾಧ್ಯಾಯ ‘ಧರ್ಮೋ ರಕ್ಷತೀ ರಕ್ಷಿತಃ’ ವಿಷಯದ ಕುರಿತು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ಜರುಗಲಿದೆ.