ಮಡಿಕೇರಿ, ಫೆ.10: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ‘ನ್ಯಾಶನಲ್ ನೋವೆಲ್ ಅಪೆÇ್ರೀಚಸ್ ಇನ್ ಕೆಮಿಕಲ್ ಸೈನ್ಸ್’ ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ ವಿಚಾರ ಸಮ್ಮೇಳನವು ತಾ. 12 ರಂದು ಬೆಳಗ್ಗೆ 9.30 ಗಂಟೆಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಲಿದೆ.
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಮಂಗಳೂರು ವಿ.ವಿಯ ಕುಲಪತಿಗಳಾದ ಪ್ರೊ.ಪಿ.ಎಸ್ ಯಡಪಡಿತಾಯ, ಮಂಗಳೂರು ವಿವಿಯ ರಸಾಯನ ಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ.ಜಿ.ಕೆ.ನಾಗರಾಜ್, ಶಿವಾಜಿ ವಿವಿಯ ರಸಾಯನಶಾಸ್ತ್ರ ವಿಭಾಗದ ಪ್ರೊ.ಅನಿಲ್ ವಿಥಲ್ ಗುಳೆ, ಕುವೆಂಪು ವಿವಿಯ ಕೈಗಾರಿಕಾ ರಸಾಯನಶಾಸ್ತ್ರದ ಅಧ್ಯಕ್ಷರಾದ ಪ್ರೊ.ಬಿ.ಇ.ಕುಮಾರಸ್ವಾಮಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ಚಿ.ಜಗತ್ ತಿಮ್ಮಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.