ಮಡಿಕೇರಿ, ಫೆ. 10: ತಾಳತ್ತಮನೆಯ ಲಿಂಗರೂಪಿ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ತಾ. 11 ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರ ತತ್ವಹೋಮ, ತತ್ವಕಲಶಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯೋಪೂಜೆ, ಆಧಿವಾಸ ಹೋಮ ಅಗ್ನಿ ಜನನ, ತತ್ವ ಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವ ಕಲಶ, ಶಯ್ಯೋನ್ನಯನ ಪೂಜೆ ಜರುಗಲಿದ್ದು, ಮಧ್ಯಾಹ್ನ 12 ಗಂಟೆಗೆ ಅಂಕುರ ಪೂಜೆ ಹಾಗೂ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆÉ ನಡೆಯಲಿದೆ.

ಸಂಜೆ 5 ಗಂಟೆಗೆ ಮಡಿಕೇರಿಯ ಶ್ರೀರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ, ಸಂಜೆ 6.30ಕ್ಕೆ ಕಾಸರಗೋಡಿನ ಶ್ರೀಕ್ಷೇತ್ರ ಕುಂಟಾರು ರವೀಶ್ ತಂತ್ರಿಯವರಿಂದ ಉಪನ್ಯಾಸ, 7 ಗಂಟೆಗೆ ಕಲ್ಲಡ್ಕ ಶ್ರೀವಿಠಲ ನಾಯಕ್ ಮತ್ತು ಬಳಗದಿಂದ ನಡೆಯುವ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.