ನವದೆಹಲಿ, ಫೆ. 1: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ದ್ವಿತೀಯ ಬಾರಿ ತನ್ನ ಬಜೆಟ್ ಮಂಡನೆ ಮಾಡಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾರ್ಷಿಕ ಆಯವ್ಯಯದ ವರದಿಯನ್ನು ಮೊದಲ ಬಾರಿಗೆ ಇಂದು ಸಂಸತ್ತಿನಲ್ಲಿ ಮಂಡಿಸಿದರು.ವಿವಿಧ ವಲಯಗಳಿಗೆ ಸಾವಿರಾರು ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ನೂತನ ಯೋಜನೆಗಳ ಜೊತೆಗೆ ಹಳೆಯ ಯೋಜನೆಗಳನ್ನು ವಿಸ್ತರಣೆ ಮಾಡಲಾಗಿದೆ.2020ರ ಕೇಂದ್ರ ಬಜೆಟ್‍ನಲ್ಲಿ ಮುಖ್ಯವಾಗಿ ನೂತನ ವೈಯಕ್ತಿಕ ಆದಾಯ ತೆರಿಗೆ ನೀತಿ ಜಾರಿಗೊಳಿಸ ಲಾಗಿದ್ದು ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸಲಾಗಿದೆ.ರೈತ ಸಮುದಾಯಕ್ಕೆ ನೆರವಾಗುವಂತಹ 16 ಅಂಶಗಳ ಯೋಜನೆ ಘೋಷಿಸ ಲಾಗಿದೆ. ಕೆಲವೊಂದು ವಸ್ತುಗಳಿಗೆ ಬೆಲೆ ಏರಿಕೆ, ಮತ್ತೆ ಕೆÀಲವು ವಸ್ತುಗಳಿಗೆ ಇಳಿಕೆ ಮಾಡಲಾಗಿದೆ. ವರಮಾನ ತೆರಿಗೆಯಲ್ಲಿ ಘೋಷಿಸಲಾದ ಸುಧಾರಣೆಗಳು ಈ ಕೆಳಗಿನಂತಿದೆ.
ವಾರ್ಷಿಕ 2.5 ಲಕ್ಷ ರೂ.ಒಳಗೆ ಆದಾಯವಿದ್ದರೆ ಯಾವುದೇ ತೆರಿಗೆ ಇಲ್ಲ. 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಆದಾಯವಿದ್ದರೆ ಶೇ. 5 ರಷ್ಟು ತೆರಿಗೆ .ವಾರ್ಷಿಕ 5 ಲಕ್ಷದಿಂದ 7.5 ಲಕ್ಷ ಆದಾಯವಿದ್ದರೆ ಶೇ. 10ರಷ್ಟು ತೆರಿಗೆ. ವಾರ್ಷಿಕ 7.5 ಲಕ್ಷದಿಂದ 10 ಲಕ್ಷ ಆದಾಯವಿದ್ದರೆ ಶೇ. 15ರಷ್ಟು ತೆರಿಗೆ.
ವಾರ್ಷಿಕ 10 ಲಕ್ಷದಿಂದ 12.5 ಲಕ್ಷ ಆದಾಯವಿದ್ದರೆ ಶೇ. 20ರಷ್ಟು ತೆರಿಗೆ.
ವಾರ್ಷಿಕ 12.5 ಲಕ್ಷದಿಂದ 15 ಲಕ್ಷ ಆದಾಯವಿದ್ದರೆ ಶೇ. 25ರಷ್ಟು ತೆರಿಗೆ.
ವಾರ್ಷಿಕ 15 ಲಕ್ಷದಿಂದ ಮೇಲ್ಪಟ್ಟ ಆದಾಯಕ್ಕೆ ಶೇ. 30 ರಷ್ಟು ತೆರಿಗೆ ಪಾವತಿಗೆ ಘೋಷಿಸಲಾಗಿದೆ.
ಕೃಷಿ ವಿಭಾಗಕ್ಕೆ ಕೊಡುಗೆ
ಕೃಷಿ ಮತ್ತು ಗ್ರಾಮೀಣಾ ಭಿವೃದ್ಧಿಯಡಿ 15 ಲಕ್ಷ ಕೋಟಿ ರೂ. ಕೃಷಿ ಸಾಲದ ಗುರಿ ಹೊಂದಲಾಗಿದೆ. ಪಿಎಂ ಕುಸುಮ್ ಯೋಜನೆಯಡಿ 20 ಲಕ್ಷ ರೈತರಿಗೆ ಸೋಲಾರ್ ಪಂಪ್‍ಗಳು ಮತ್ತು 15 ಲಕ್ಷ ರೈತರಿಗೆ ‘ಗ್ರಿಡ್ ಕನೆಕ್ಟೆಡ್ ಪಂಪ್’ಗಳು ತಲುಪುವಂತೆ ಮಾಡುವುದು. - ಪಿಪಿಪಿ ಮಾದರಿಯಲ್ಲಿ ದಕ್ಷ ಗೋದಾಮುಗಳ ರಚನೆಗೆ ನಿಧಿಗಳ ಸ್ಥಾಪನೆ ಕೃಷಿ ಸಾಲ ಗುರಿ 1.7 ಲಕ್ಷ ಕೋಟಿ ನಿಗದಿಪಡಿಸ ಲಾಗಿದೆ. 2025ರ ಹೊತ್ತಿಗೆ ಹಾಲು ಉತ್ಪಾದನೆಯನ್ನು ದ್ವಿಗುಣ ಗೊಳಿಸುವುದು. ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ 2.83 ಲಕ್ಷ ಕೋಟಿ ರೂ. ಅನುದಾನ. ಅನ್ನದಾತ ವಿದ್ಯುತ್‍ದಾತನೂ ಆಗುತ್ತಾನೆ. ದೇಶದ 100 ಜಿಲ್ಲೆಗಳಲ್ಲಿ ಜಲವರ್ಧನೆಗೆ ಕ್ರಮ.
ಬರಡು ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ. ಬರಡು ಭೂಮಿಯಲ್ಲಿ ಸಾವಯವ ಕೃಷಿ ಉತ್ಪಾದನೆಗೆ ಪ್ರೋತ್ಸಾಹ.
ಕೃಷಿ ಮಾರುಕಟ್ಟೆ ಉದಾರೀಕರಣ ಗೊಳಿಸಲು ಕ್ರಮ. ಕೃಷಿ ಅಭಿವೃದ್ಧಿಗೆ 16 ಅಂಶಗಳು ಪ್ರಕಟ. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು.
(ಮೊದಲ ಪುಟದಿಂದ) 2022ರ ವೇಳೆಗೆ ಕೃಷಿ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ರೈತರಿಗೆ ಧಾನ್ಯ ಲಕ್ಷ್ಮಿ ಯೋಜನೆ ಜಾರಿ. ರೈತ ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿ. ನರೇಗಾ ಯೋಜನೆಯಡಿ ಜೇನು ಕೃಷಿಗೆ ಉತ್ತೇಜನ. ಕೃಷಿ ಉತ್ಪನ್ನಗಳಿಗಾಗಿ ಇ-ಮಾರುಕಟ್ಟೆ ಕಲ್ಪಿಸುವದು.
ಪ್ರಧಾನಮಂತ್ರಿ ಫಸಲ್ ಭೀಮ್ ಯೋಜನೆ. ಫಸಲ್ ಭೀಮಾ ಯೋಜನೆಯಿಂದ 6.11 ಕೋಟಿ ರೈತರಿಗೆ ಅನುಕೂಲ.ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಿಂದ 6.11 ಕೋಟಿ ರೈತರಿಗೆ ಅನುಕೂಲ. 2022-23ರ ವೇಳೆಗೆ 200 ಟನ್‍ಗಳಷ್ಟು ಮೀನು ಉತ್ಪಾದನಾ ಗುರಿ - ಹೊಂದಲಾಗಿದೆ.
ಇತರ ಯೋಜನೆಗಳು
ಇನ್ನುಳಿದಂತೆ, ಸಾರಿಗೆ ಮೂಲಸೌಕರ್ಯ 27,300 ಕೋಟಿ; ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ 3,000 ಕೋಟಿ ; ಕೌಶಲ್ಯ ಅಭಿವೃದ್ಧಿ 69, 000 ಕೋಟಿ; ಆರೋಗ್ಯ ಕ್ಷೇತ್ರಕ್ಕೆ 12,300 ಕೋಟಿ ; ಸ್ವಚ್ಛ ಭಾರತ ಮಿಷನ್‍ಗೆ 53,700 ಕೋಟಿ; ಬುಡಕಟ್ಟು ಜನಾಂಗ ಕಲ್ಯಾಣ ಯೋಜನೆಗಳು 85,000 ಕೋಟಿ ; ಎಸ್‍ಸಿ, ಒಬಿಸಿ ವರ್ಗಗಳ ಕಲ್ಯಾಣ ಯೋಜನೆಗಳು 3.6 ಲಕ್ಷ ಕೋಟಿ ;: ಜಲ ಜೀವನ ಯೋಜನೆಗೆ 4,400 ಕೋಟಿ; ಹವಾಮಾನ ಬದಲಾವಣೆ ಯೋಜನೆಗಳಿಗಾಗಿ 99,300 ಕೋಟಿ; ಶಿಕ್ಷಣ ಕ್ಷೇತ್ರಕ್ಕೆ 2,500 ಕೋಟಿ; ಪ್ರವಾಸೋದ್ಯಮ ಅಭಿವೃದ್ಧಿಗೆ 9,500 ಕೋಟಿ; ಹಿರಿಯ ನಾಗರಿಕರು ಮತ್ತು ದಿವ್ಯಾಂಗರ ಕಲ್ಯಾಣ ಯೋಜನೆಗಳಿಗೆ 3,150 ಕೋಟಿ; ಸಂಸ್ಕೃತಿ ಇಲಾಖೆಗೆ 6,000 ಕೋಟಿ; ಹಳ್ಳಿಗಳಲ್ಲಿ ಬ್ರಾಡ್‍ಬ್ಯಾಂಡ್ ಇಂಟರ್‍ನೆಟ್ ಸೇವೆ ಒದಗಿಸುವ ಭಾರತ್ ನೆಟ್‍ಯೋಜನೆಗೆ 28,600 ಕೋಟಿ; ಮಹಿಳಾ ನಿರ್ದಿಷ್ಟ ಕಾರ್ಯಕ್ರಮಗಳಿಗೆ 22,000 ಕೋಟಿ;ಇಂಧನ ಮತ್ತು ನವೀಕರಿಸಬಹುದಾದ ಶಕ್ತಿಗೆ 1,480 ಕೋಟಿ ನಿಗದಿಪಡಿಸಲಾಗಿದೆ.
ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ರೈಲ್ವೆ, ರಸ್ತೆ ಮತ್ತು ನಾಗರಿಕ ವಿಮಾನಯಾನ ಇಲಾಖೆ ಮೂಲಕ - ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ 150 ರೈಲುಗಳ ಓಡಾಟ ಆರಂಭಿಸುವುದು - ಪ್ರವಾಸಿ ತಾಣಗಳಿಗೆ ಹೆಚ್ಚಿನ ತೇಜಸ್ ಮಾದರಿಯ ರೈಲುಗಳು -ಖಾಸಗಿ ಸಹಭಾಗಿತ್ವದಲ್ಲಿ ನಾಲ್ಕು ರೈಲ್ವೇ ನಿಲ್ದಾಣಗಳ ಅಭಿವೃದ್ಧಿ - ಬೆಂಗಳೂರಿನ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು 18,600 ಕೋಟಿ ರೂ - 2023ರ ವೇಳಗೆ ದೆಹಲಿ-ಮುಂಬೈ ಎಕ್ಸ್‍ಪ್ರೆಸ್ ಹೆದ್ದಾರಿ ಪೂರ್ಣಗೊಳ್ಳುವುದು - ಪಿಪಿಪಿ ಮಾದರಿಯಲ್ಲಿ ಭಾರತೀಯ ರೈಲ್ವೆ ಶೀತ ಪೂರೈಕೆ ಸರಪಳಿಯನ್ನು ಸ್ಥಾಪಿಸಲು 'ಕಿಸಾನ್ ರೈಲು' ಸ್ಥಾಪಿಸುವುದು - ಉದ್ದಾನ್ ಅಡಿಯಲ್ಲಿ ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಸ್ಥಾಪನೆಯ ಗುರಿಯನ್ನು ಹೊಂದಲಾಗಿದೆ.
ಬಜೆಟ್‍ನ ಇತರ ಅಂಶಗಳು
ಮಾರ್ಚ್ 2014 ರಲ್ಲಿ 52.2 ಪರ್ಸೆಂಟ್‍ನಷ್ಟಿದ್ದ ಕೇಂದ್ರ ಸರ್ಕಾರದ ಸಾಲದ ಪ್ರಮಾಣವು, ಮಾರ್ಚ್ 2019ಕ್ಕೆ 48.7 ಪರ್ಸೆಂಟ್‍ಗೆ ಇಳಿಕೆಯಾಗಿದೆ. - ವಿತ್ತೀಯ ಕೊರತೆಯನ್ನು ಜಿಡಿಪಿಯ 3.8 ಪರ್ಸೆಂಟ್‍ನಿಂದ 3.5 ಪರ್ಸೆಂಟ್ಗೆ ಇಳಿಸಲು ಗುರಿ - 2014 ರಿಂದ 2019ರ ಅವಧಿಯಲ್ಲಿ 284 ಬಿಲಿಯನ್ ಡಾಲರ್‍ನಷ್ಟು ಎಫ್‍ಡಿಐ (ವಿದೇಶಿ ನೇರ ಹೂಡಿಕೆ) ಪಡೆಯಲಾಗಿದೆ. - 2019-20 ನೇ ಸಾಲಿನ ಹಣಕಾಸು ವರ್ಷದ ಖರ್ಚು ಅಂದಾಜು 26.99 ಲಕ್ಷ ಕೋಟಿ ರೂ.ಗಳು - 2021ನೇ ಹಣಕಾಸು ವರ್ಷದ ಪರಿಷ್ಕೃತ ಸ್ವೀಕೃತಿ 19.32 ಲಕ್ಷ ಕೋಟಿ ರೂ.ಗಳು - ಮೊಬೈಲ್, ಅರೆವಾಹಕಗಳು (ಸೆಮಿಕಂಡಕ್ಟರ್) ಮತ್ತು ಇತರ ಎಲೆಕ್ಟ್ರಾನಿಕ್‍ಸಾಧನಗಳ ತಯಾರಿಕೆಗೆ ಒಂದು ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಬ್ಯಾಂಕಿಂಗ್ ಮತ್ತು ಹಣಕಾಸು ಯೋಜನೆಯಡಿ ಬ್ಯಾಂಕ್‍ನಲ್ಲಿ ನಾಗರಿಕರು ಇಟ್ಟ ಠೇವಣಿ ಏನಾದರೂ ನೈಸರ್ಗಿಕ ವಿಕೋಪಗಳು, ಇಲ್ಲವೆ ಕಳ್ಳತನವಾಗಿದ್ದರೆ ರೂ. 1 ಲಕ್ಷದವರೆಗೆ ಪರಿಹಾರ ಮೊತ್ತವನ್ನು ನೀಡಲಾಗುತ್ತಿತ್ತು. ಇದೀಗ ಈ ಬಜೆಟ್‍ನಲ್ಲಿ ಪರಿಹಾರ ಮೊತ್ತವನ್ನು ಐದು ಪಟ್ಟು ಹೆಚ್ಚಿಸಲಾಗಿದ್ದು, ಠೇವಣಿಗೆ ಪರಿಹಾರವಾಗಿ ಐದು ಲಕ್ಷ ರೂ. ನೀಡಲಾಗುವುದು - ಎನ್‍ಬಿಎಫ್‍ಸಿಗಳಿಗೆ ಸರ್ಫೇಸಿ ಕಾಯ್ದೆಯಡಿ ಸಾಲ ಮರುಪಡೆಯುವಿಕೆಗೆ ಅರ್ಹತಾ ಮಿತಿಯನ್ನು 100 ಕೋಟಿ ರೂ.ಗಳ ಆಸ್ತಿ ಗಾತ್ರಕ್ಕೆ ಅಥವಾ ಸಾಲದ ಗಾತ್ರ 50 ಲಕ್ಷಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ. - ಐಡಿಬಿಐ ಬ್ಯಾಂಕಿನಲ್ಲಿ ಸರ್ಕಾರದ ‘ಬ್ಯಾಲೆನ್ಸ್ ಹೋಲ್ಡಿಂಗ್’ ಅನ್ನು ಮಾರಾಟ ಮಾಡುವ ಪ್ರಸ್ತಾಪ - ಸರ್ಕಾರಿ ನೌಕರರಿಗೆ ಎನ್‍ಪಿಎಸ್ ಟ್ರಸ್ಟ್ ಅನ್ನು ಪಿಎಫ್‍ಆರ್‍ಡಿಎಐನಿಂದ ಬೇರ್ಪಡಿಸುವುದು ಮಾರುಕಟ್ಟೆ -ಎಲ್‍ಐಸಿಯನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲು ಸರ್ಕಾರ ಅನುಮೋದನೆ ಮಾಡಿದೆ. ಎಲ್‍ಐಸಿಯಲ್ಲಿನ ಸರ್ಕಾರಿ ಹೂಡಿಕೆ ಅಲ್ಪ ಪ್ರಮಾಣದ ಮಾರಾಟ -ಲಾಭಾಂಶ ವಿತರಣಾ ತೆರಿಗೆಯನ್ನು ತೆಗೆದುಹಾಕಲಾಗಿದೆ -ಸರ್ಕಾರಿ ಭದ್ರತೆಗಳನ್ನು ಒಳಗೊಂಡಿರುವ ಸಾಲ ಇಟಿಎಫ್ ಅನ್ನು ಪ್ರಾರಂಭಿಸಲಾಗುವುದು -ಅನಿವಾಸಿ ಹೂಡಿಕೆದಾರರಿಗೆ ಸರ್ಕಾರಿ ಭದ್ರತೆಗಳ ನಿರ್ದಿಷ್ಟ ವರ್ಗಗಳನ್ನು ತೆರೆಯಲಾಗುತ್ತದೆ - ಕಾರ್ಪೊರೇಟ್ ಬಾಂಡ್‍ಗಳ ಎಫ್‍ಪಿಐ ಮಿತಿಯನ್ನು 15 ಪರ್ಸೆಂಟ್ ಹೆಚ್ಚಿಸಬೇಕು.
ಗಾಮ ಪಂ.ಗಳಿಗೆ ನೆಟ್ ಸೇವೆ
ಒಂದು ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಭಾರತ್ ನೆಟ್ ಸೇವೆ ಒದಗಿಸಲಾಗುವದು.
ನೂತನ ಕೇಂದ್ರಾಡಳಿತ ಪ್ರದೇಶಗಳಾಗಿರುವ ಜಮ್ಮು-ಕಾಶ್ಮೀರ ಹಾಗೂ ಲಡಾಖ್‍ಗೆ ವಿಶೇಷ ಆರ್ಥಿಕ ಪ್ಯಾಕೇಜ್.
ಸ್ಟಡಿ ಇನ್ ಇಂಡಿಯಾ - ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಬಂದು ಕಲಿಯಲು ಅವಕಾಶ.
ರಫ್ತು ಉದ್ಯಮ ಜಿಲ್ಲೆ ಜಿಲ್ಲೆಗಳಲ್ಲೂ ಬಲಗೊಳ್ಳಲು ‘ನಿರ್ವಿಕ್’ ಯೋಜನೆ ಜಾರಿ.
ದೇಶಾದ್ಯಂತ ಮೂಲ ಸೌಕರ್ಯಕ್ಕೆ 103 ಲಕ್ಷ ಕೋಟಿ ರೂ. ಅನುದಾನ
12 ರೋಗಗಳ ವಿರುದ್ಧ ಹೋರಾಡಲು ‘ಇಂದ್ರ ಧನುಷ್' ಯೋಜನೆ.
ಈಶಾನ್ಯ ರಾಜ್ಯಗಳು ಹಾಗೂ ಕೃಷಿ ಉತ್ತೇಜನಕ್ಕಾಗಿ 'ಕೃಷಿ ಉಡಾನ್' ಯೋಜನೆ.
ಸ್ಮಾರ್ಟ್ ಫೋನ್
6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ‘ಸ್ಮಾರ್ಟ್‍ಫೋನ್' ವಿತರಣೆ.
ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಭಾರತ ಬದ್ಧ. ಜನರು ಸ್ವಚ್ಛ ಗಾಳಿ ಸೇವಿಸುವಂತೆ ಮಾಡಲು ಕ್ರಮ.
ದೇಶಾದ್ಯಂತ ಥರ್ಮಲ್ ವಿದ್ಯುತ್ ಉತ್ಪಾದನಾ ಘಟಕ ಸ್ಥಗಿತ.
‘ರಾಷ್ಟ್ರೀಯ ನೇಮಕಾತಿ ಏಜೆನ್ಸಿ' ಸ್ಥಾಪನೆ - ನಾನ್‍ಗೆಜೆಟೆಡ್ ಹುದ್ದೆಗಳಿಗೆ ಆನ್‍ಲೈನ್ ನೇಮಕಾತಿ.
ಇನ್ನು ಆಧಾರ್ ಕಾರ್ಡಿಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ. ಆಧಾರ್ ಸಂಖ್ಯೆಯ ಆಧಾರದ ಮೇಲೆ ಪಾನ್ ಕಾರ್ಡ್ ಮಂಜೂರು.
ರಿಯಲ್ ಎಸ್ಟೇಟ್‍ಗೆ ಪ್ರೋತ್ಸಾಹ
ಕ್ಷೇತ್ರಕ್ಕೆ ಬಂಪರ್ ಕೊಡುಗೆ. ಮಧ್ಯಮ ಬಜೆಟ್‍ನಲ್ಲಿ ಮನೆ ನಿರ್ಮಿಸುವ ಬಿಲ್ಡರ್‍ಗಳು ಒಂದು ವರ್ಷದ ಲಾಭಾಂಶದ ಮೇಲೆ ತೆರಿಗೆ ಕಟ್ಟಬೇಕಾಗಿಲ್ಲ.
5 ಕೋಟಿ ಆದಾಯದ ಕಂಪನಿಗಳಿಗೆ ಆಡಿಟಿಂಗ್ ಇಲ್ಲ.
ಐಡಿಬಿಐ ಬ್ಯಾಂಕ್ ಸಂಪೂರ್ಣ ಖಾಸಗೀಕರಣ. ಡಿಪಾಸಿಟ್ ವಿಮೆ ಮೊತ್ತ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಉದ್ಯೋಗ ಹೆಚ್ಚಳಕ್ಕೆ ಕ್ರಮ. 5 ಲಕ್ಷ ಎಂಎಸ್‍ಎಂಇಗಳು ಪುನಶ್ಚೇತನಗೊಂಡಿವೆ.
ನೂತನ ಕೇಂದ್ರಾಡಳಿತ ಪ್ರದೇಶ ಲಡಾಕ್‍ಗಾಗಿ 5,958 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ.
ವಿಮಾ ಭದ್ರತೆ ಸೌಲಭ್ಯ 5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಠೇವಣಿದಾರರಿಗೆ ಅನ್ವಯವಾಗುವಂತೆ ಮಿತಿ ಹೆಚ್ಚಳ. ಬ್ಯಾಂಕ್‍ಗಳ ಆರ್ಥಿಕ ಸ್ಥಿತಿಗತಿಗಳ ಮೇಲೆ ಸರ್ಕಾರದ ತೀವ್ರ ನಿಗಾ. ಆಯುಷ್ಮಾನ್ ಭಾರತ ಯೋಜನೆಯಡಿ 112 ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಗುರಿ. 2020 ಮಾರ್ಚ್ 31ರ ಒಳಗೆ ಬಾಕಿ ತೆರಿಗೆ ಪಾವತಿಸಿದರೆ ದಂಡ ಹಾಗೂ ಬಡ್ಡಿ ಮನ್ನಾ.