ಮಡಿಕೇರಿ, ಫೆ. 1: ಮೂರ್ನಾಡು ಸಮೀಪದ ಬೇತ್ರಿ ಗ್ರಾಮದ ನಿವಾಸಿ ಎ. ಪೂವಯ್ಯ ಎಂಬವರ ತೋಟದಲ್ಲಿ ಕೆಲಸಕ್ಕಿದ್ದ ಕಾರ್ಮಿಕ ಮಹಿಳೆ ಶಾಂತಿ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಕಾರ್ಮಿಕ ದಿ. ರಘು ಎಂಬವರ ಪತ್ನಿಯಾಗಿದ್ದ ಈಕೆಯ ಸಾವಿಗೆ ಜೀವನದಲ್ಲಿ ಜಿಗುಪ್ಸೆ ಕಾರಣವೆಂದು ತಿಳಿದು ಬಂದಿದೆ. ಗ್ರಾಮಾಂತರ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.