ಮಡಿಕೇರಿ, ಫೆ.2 : ಆರ್ಯ ವೈಶ್ಯ ಜನಾಂಗದವರಿಗೆ ಈ ಹಿಂದೆ ಜಾತಿ ಪ್ರಮಾಣ ಪತ್ರವನ್ನು ವಿದ್ಯಾಭ್ಯಾಸದ ಸಲುವಾಗಿ, 18 ವರ್ಷ ಒಳಪಟ್ಟವರಿಗೆ ಮಾತ್ರ ನೀಡಲಾಗುತಿತ್ತು. 2019ರ ಡಿಸೆಂಬರ್, 16 ರಂದು ಕರ್ನಾಟಕ ರಾಜ್ಯ ಸರ್ಕಾರವು ಇನ್ನು ಮುಂದೆ ಆರ್ಯ ವೈಶ್ಯ ಜನಾಂಗದವರಿಗೆ ಶಾಲಾ ಪ್ರವೇಶಕ್ಕೆ ಮಾತ್ರವಲ್ಲದೆ ಸರ್ಕಾರಿ ಸಂಸ್ಥೆಗಳಿಂದ ಸಾಲ, ಸಹಾಯಧನ ಮತ್ತು ತರಬೇತಿ ಪಡೆಯಲು ಜಾತಿ ಆದಾಯ ಪ್ರಮಾಣ ಪತ್ರವನ್ನು ನಮೂನೆ-ಜಿ ಯಲ್ಲಿ ಪಡೆಯಲು ಆದೇಶಿಸಿದ್ದು, ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಂದ ಸಾಲ-ಸೌಲಭ್ಯಗಳನ್ನು ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಆದ್ದರಿಂದ ಆರ್ಯ ವೈಶ್ಯ ಸಮುದಾಯದವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನಮೂನೆ-ಜಿ ಯಲ್ಲಿ ಪಡೆಯಲು ನಾಡ ಕಚೇರಿ ಕೇಂದ್ರ ಬೆಂಗಳೂರು-ಒನ್, ಕರ್ನಾಟಕ-ಒನ್, ಹಾಗೂ ನಾಡ ಕಚೇರಿಯ ಅಂತರ್ಜಾಲ ತಿತಿತಿ.ಟಿಚಿಜಚಿಞಚಿಛಿheಡಿi.ಞಚಿಡಿಟಿಚಿಣಚಿಞಚಿ.gov.iಟಿ ಇಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ನಿಗಮದ ಸಹಾಯವಾಣಿ 9448451111 ಇ-ಮೇಲ್ suಠಿಠಿoಡಿಣ.ಞಚಿಛಿಜಛಿ@ಞಚಿಡಿಟಿಚಿಣಚಿಞಚಿ.gov.iಟಿ ಅಥವಾ ದೂ..ಸಂ. 18005990044 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಕೋರಿದ್ದಾರೆ.
ನಿಡ್ತ ಸಾಹಿತ್ಯ ಸಮ್ಮೇಳನಕ್ಕೆ ತೆರೆ
ನಿಡ್ತ-ಸೋಮವಾರಪೇಟೆ,ಫೆ.2: ನಿಡ್ತ ಗ್ರಾಮಸ್ಥರು ಮತ್ತು ಜಿಲ್ಲೆಯ ಮೂಲೆಮೂಲೆಯಿಂದ ಆಗಮಿಸಿದ್ದ ಕನ್ನಡಾಭಿಮಾನಿಗಳ ಸಮ್ಮಿಲನ ದೊಂದಿಗೆ, ನಿಡ್ತ ಗ್ರಾಮದಲ್ಲಿ ಜಿಲ್ಲಾ ಕಸಾಪ ವತಿಯಿಂದ ಆಯೋಜಿಸಿದ್ದ, 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆಬಿದ್ದಿತು.
ಸಮಾರಂಭದ ದಿವ್ಯಸಾನ್ನಿಧ್ಯವನ್ನು ಅರಮೇರಿ ಕಳಂಚೇರಿ ಮಠಾಧೀಶ ರಾದ ಶ್ರೀ ಶಾಂತಮಲಿ ್ಲಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ಧರ್ಮಸ್ಥಳ ಮಂಜು ನಾಥೇಶ್ವರ ತುಳು ಪೀಠದ ಸಂಯೋಜಕ ಮಾಧವ ಸಮಾರೋಪ ಭಾಷಣ ಮಾಡಿ, ಗ್ರಾಮೀಣ ಪ್ರದೇಶದಲ್ಲೇ ಕನ್ನಡ ಜನಪದ ಉಳಿದಿದೆ. ಭಾಷೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮೊಂದಿಗೆ ಅದು ಉಳಿದುಕೊಳ್ಳುತ್ತದೆ ಎಂದರು.
ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಇತ್ತೀಚೆಗೆ ನ್ಯಾಯಾಂಗದ ತೀರ್ಪುಗಳೂ ಸಹ ಕನ್ನಡ ಭಾಷೆಯಲ್ಲೇ ಬರುತ್ತಿವೆ. ಅಂತಹ ನ್ಯಾಯಾಧೀಶರನ್ನು ಗುರುತಿಸುವ ಕಾರ್ಯ ಕಸಾಪದಿಂದ ನಡೆಯುತ್ತಿದೆ ಎಂದರು. ಸಮ್ಮೇಳನಾಧ್ಯಕ್ಷ ನಾಗೇಶ್ ಕಾಲೂರು, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರುಗಳು ಮಾತನಾಡಿದರು.
ವೇದಿಕೆಯಲ್ಲಿ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಗ್ರಾ.ಪಂ. ಅಧ್ಯಕ್ಷ ಮುಸ್ತಫ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ, ತಾ.ಪಂ. ಸದಸ್ಯೆ ಲೀಲಾವತಿ, ಡಿ.ಬಿ. ಧರ್ಮಪ್ಪ, ಲಯನ್ಸ್ ಸಂಸ್ಥೆ ಅಧ್ಯಕ್ಷ ಎನ್.ಬಿ. ನಾಗಪ್ಪ, ಗ್ರಾ.ಪಂ. ಸದಸ್ಯ ವಿಜಯಕುಮಾರ್, ಹೆಚ್.ಎಸ್. ಸುಬ್ಬಪ್ಪ, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಮಡಿಕೇರಿ ಅಧ್ಯಕ್ಷ ಕುಡೆಕಲ್ ಸಂತೋಷ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯ ಕ್ರಮ ನಡೆಯಿತು.
ಸಾಧಕರಿಗೆ ಸನ್ಮಾನ: ಸಮ್ಮೇಳನದ ಸರ್ವಾಧ್ಯಕ್ಷ ನಾಗೇಶ್ ಕಾಲೂರು ದೊಡ್ಡಮಳ್ತೆ ಗ್ರಾಮದ ಡಿ.ಎಂ. ಕೊಮಾರಪ್ಪ, ಎನ್.ಬಿ. ನಾಗಪ್ಪ, ಎಂ.ಜಿ. ಯಶವಂತ್, ರೂಪೇಶ್ ನಾಣಯ್ಯ, ಸುಬ್ಬಯ್ಯ, ಎ.ಕೆ. ಹರ್ಷಿತ್, ಡಾ. ಪುಟ್ಟರಾಜು ಅವರುಗಳ ಸಾಧನೆಗೆ ಸನ್ಮಾನಿಸಲಾಯಿತು.
ಸಹಕಾರ ಕ್ಷೇತ್ರದಿಂದ ಹೆಚ್.ಎಸ್. ಸುಬ್ಬಪ್ಪ, ಮಾಧ್ಯಮ ಕ್ಷೇತ್ರದಿಂದ ಹೆಚ್.ಆರ್. ಹರೀಶ್ಕುಮಾರ್, ಕ್ರೀಡಾ ಕ್ಷೇತ್ರದಿಂದ ಅಭಿಷೇಕ್ಗೌಡ, ಬುಡಕಟ್ಟು ಜನಪದ ಕ್ಷೇತ್ರದಿಂದ ಮಣಿ ಮುತ್ತಪ್ಪ, ಜಾನಪದ ಕ್ಷೇತ್ರದಿಂದ ಭರಮಣ್ಣ ಬೆಟ್ಟಗೇರಿ, ನ್ಯಾಯಾಂಗ ಸೇವೆಯಲ್ಲಿ ಎಂ.ಆರ್. ದೇವಪ್ಪ, ಯಕ್ಷಗಾನದಲ್ಲಿ ಕೆ.ಡಿ. ಕುಶಾಲಪ್ಪ, ಸಮಾಜ ಸೇವೆಗಾಗಿ ಎಸ್.ಪಿ. ಪ್ರಸನ್ನ, ವಿಶೇಷ ಸಾಧನೆಗೆ ಎನ್.ಡಿ. ಕಿರಣ ಅವರುಗಳನ್ನು ಅಭಿನಂದಿಸಲಾಯಿತು.
ಮಲೆನಾಡು ಹಳ್ಳಿವಾದ್ಯ ಶಿವರಾಜ್, ರಕ್ಷಣಾ ಸೇವೆಯಿಂದ ಅನೂಪ್ ಮಾದಪ್ಪ, ಅರಣ್ಯ ಸಂರಕ್ಷಣೆ ಎಂ.ಎಸ್. ಚಿಣ್ಣಪ್ಪ, ನಾಟಿ ವೈದ್ಯೆ ಜೀನತ್, ಕರಾಟೆ ತರಬೇತಿ ಎನ್.ಎಸ್. ಅರುಣ, ತಾಂತ್ರಿಕ ಶಿಕ್ಷಣ ಹೆಚ್.ವಿ. ಶಿವಪ್ಪ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಹೆಚ್.ಹೆಚ್. ಆಶಿಕ, ಲೋಕಾಯುಕ್ತ ನಿವೃತ್ತ ಎಸ್.ಪಿ. ಶಿವಮೂರ್ತಿ, ಯೋಗ ತರಬೇತುದಾರ ಜೈಚಂದನ್, ಕೆಎಸ್ಆರ್ಟಿಸಿ ಚಾಲಕ ಧನರಾಜ್, ಸಮಾಜ ಸೇವಕಿ ಫಿಲೋಮಿನಾ, ಶಿಕ್ಷಣ ಕ್ಷೇತ್ರದಿಂದ ಶ್ರೀಧರ್, ಯುವ ಪ್ರತಿಭೆ ಕೆ.ಎಸ್. ಸುರಕ್ಷ, ಕೃಷಿ ಕ್ಷೇತ್ರದಿಂದ ಸಣ್ಣಯ್ಯ, ಸುರೇಶ ಹೆಚ್.ಬಿ., ಬಸವರಾಜು, ಡಿ.ಡಿ. ನಂಜಪ್ಪ, ಶಿಕ್ಷಕ ಸತೀಶ್, ಹಾಗೂ ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘದ ಪದಾಧಿಕಾರಿಗಳು, ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಪ್ರಮುಖರು, ವಿವಿಧ ಸಮಿತಿಗಳ ಮುಖಂಡರನ್ನು ಸನ್ಮಾನಿಸಲಾಯಿತು.