ಮೂರ್ನಾಡು: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಉಪನ್ಯಾಸಕ ಹರೀಶ್ ಕಿಗ್ಗಾಲುರವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿ, ಮತದಾನದ ಮಹತ್ವವನ್ನು ತಿಳಿಸಿಕೊಟ್ಟರು. ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಉಪಸ್ಥಿತರಿದ್ದರು.

ಶನಿವಾರಸಂತೆ: ಬಸವನಹಳ್ಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಸೋಮವಾರಪೇಟೆ ತಾಲೂಕಿನಿಂದ 48 ವಿಜ್ಞಾನ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅವುಗಳಲ್ಲಿ ರಾಜ್ಯಮಟ್ಟಕ್ಕೆ 4 ಮಾದರಿಗಳು ಆಯ್ಕೆಯಾದವು. ಶನಿವಾರಸಂತೆ ಸಮೀಪದ ಹಾರೆಹೊಸೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾದ ಏಕೈಕ ಸರಕಾರಿ ಶಾಲೆಯಾಗಿದೆ. ವಿದ್ಯಾರ್ಥಿನಿ ಚೇತನಶ್ರೀ ಒಣಹಾಕಿರುವ ವಸ್ತುಗಳಿಗೆ ಮಳೆಯಿಂದ ರಕ್ಷಿಸುವ ಮಾದರಿಯನ್ನು ನಿರ್ಮಿಸಿದ್ದರು. ಶಿಕ್ಷಕ ದಿವಾಕರ್, ಮುಖ್ಯ ಶಿಕ್ಷಕಿ ಲಲಿತಾ, ಶಿಕ್ಷಕರಾದ ಸುಂದರ್ ಮತ್ತು ಕವಿತಾ ಮಾರ್ಗದರ್ಶನ ನೀಡಿದ್ದರು.

ಮಡಿಕೇರಿ: ಮೂರ್ನಾಡು ಪದವಿ ಕಾಲೇಜಿನಲ್ಲಿ ಸರ್ಟಿಫಿûಕೇಟ್ ಕೋರ್ಸ್ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಕಾವೇರಿ ಶಾಲೆ ವೀರಾಜಪೇಟೆಯ ಪ್ರಾಂಶುಪಾಲ ಸುಧೀಶ್ ಆಗಮಿಸಿದ್ದರು. ತಮ್ಮ ಭಾಷಣದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಬಹಳಷ್ಟು ಸಸ್ಯಗಳು ವೈದ್ಯಕೀಯವಾಗಿ ಹೇಗೆ ಮೌಲ್ಯ ಇರುವಂತವು, ನಮಗೆ ಅವುಗಳ ಸ್ಪಷ್ಟ ಅರಿವಿಲ್ಲದೆ ಹಾಗೂ ಮೂಢನಂಬಿಕೆಗಳ ಕಾರಣದಿಂದಾಗಿ ಅವು ಹೇಗೆ ನೇಪಥ್ಯಕ್ಕೆ ಸರಿದು ಅಳಿದು ಹೋಗುತ್ತಿವೆ ಎಂಬ ಬಗ್ಗೆ ಮನೋಜ್ಞವಾಗಿ ತಿಳಿಸಿಕೊಟ್ಟರು. ಅವುಗಳ ವೈಜ್ಞಾನಿಕ ಮಹತ್ವವನ್ನು ಅರಿತು ಉಳಿಸಿ ಬೆಳೆಸಿಕೊಳ್ಳುವತ್ತ ದೃಷ್ಟಿ ಹರಿಸುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಎಲ್ಲ ಉಪನ್ಯಾಸಕ ವರ್ಗದವರು ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪೆÇ್ರ. ಪಟ್ಟಡ ಪೂವಣ್ಣ ವಹಿಸಿದ್ದರು.

ಮೂರ್ನಾಡು: ವಿವೇಕಾನಂದ ಜನ್ಮದಿನ ಪ್ರಯುಕ್ತ ಇತ್ತೀಚೆಗೆ ಕಾವೇರಿ ಕಾಲೇಜು ವೀರಾಜಪೇಟೆಯಲ್ಲಿ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ‘ವಿವೇಕಾನಂದರ ಜೀವನ ಹಾಗೂ ಭೋಧನೆಗಳು’ ಎಂಬ ವಿಷಯದಲ್ಲಿ ಮೂರ್ನಾಡು ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಅನ್ವರ್ ಪಿ.ಐ. ಕನ್ನಡ ವಿಭಾಗದಲ್ಲಿ ಹಾಗೂ ಯಶಿಕಾ ಪಿ.ಕೆ. ಆಂಗ್ಲ ಭಾಷಾ ವಿಭಾಗದಲ್ಲಿ ತೃತೀಯ ಸ್ಥಾನಗಳಿಸಿ ದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಪೆÇ್ರ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.ಸೋಮವಾರಪೇಟೆ: ಸಮೀಪದ ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಂಘದ ಅಧ್ಯಕ್ಷರಾಗಿ ತೃತೀಯ ಬಿ.ಎ. ವಿದ್ಯಾರ್ಥಿ ವಿಶ್ವನಾಥ್ ಆಯ್ಕೆಯಾಗಿದ್ದಾರೆ.

ಕಾಲೇಜಿನ ಸಭಾಂಗಣದಲ್ಲಿ ಸಂಘದ ಸಂಚಾಲಕ ಎಂ.ಎಸ್. ಸುನಿಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಹ ಸಂಚಾಲಕರಾಗಿ ಇತಿಹಾಸ ವಿಭಾಗದ ಉಪನ್ಯಾಸಕರುಗಳಾದ ಶಿವಕುಮಾರ್ ಹಾಗೂ ರಚನಾ ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ತೃತೀಯ ಬಿ.ಎ. ವಿಭಾಗದ ತೀರ್ಥಕಲಾ, ದಿಗ್ವಿಜಯ್, ಪ್ರಧಾನ ಕಾರ್ಯದರ್ಶಿಯಾಗಿ ಚಂದನ, ಸಹಕಾರ್ಯದರ್ಶಿಗಳಾಗಿ ಹಿತ ಮತ್ತು ಕಿಶೋರ್, ಸಂಘಟನಾ ಕಾರ್ಯದರ್ಶಿಗಳಾಗಿ ದ್ವಿತೀಯ ಬಿ.ಎ. ವಿದ್ಯಾರ್ಥಿಗಳಾದ ಮಾನಸ್ ಮತ್ತು ಶೌರ್ಯ, ಪ್ರಥಮ ಬಿ.ಎ ವಿದ್ಯಾರ್ಥಿಗಳಾದ ತೇಜಸ್ವಿನಿ, ಸುಶ್ಮಿತ, ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ಬಿ.ಸಿ. ರಂಜಿತ ಮತ್ತು ಕೌಶಲ್ಯ ಆಯ್ಕೆಯಾದರು.

ಇದೇ ಸಂದರ್ಭ ವೇದಿಕೆ ಸಮಿತಿ, ಸ್ವಾಗತ ಸಮಿತಿ, ಪ್ರಯಾಣ ಸಮಿತಿ, ಆಹಾರ ಸಮಿತಿ, ಪ್ರಚಾರ ಸಮಿತಿ, ಸಾಂಸ್ಕøತಿಕ ಸಮಿತಿ, ಹಣಕಾಸು ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಸೆಮಿನಾರ್, ಇನ್ನಿತರ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಸಮಿತಿಗಳು ಸಹಕರಿಸಬೇಕೆಂದು ಸಂಚಾಲಕ ಸುನಿಲ್ ಮನವಿ ಮಾಡಿದರು.

ಸಮಿತಿಗಳ ಉಸ್ತುವಾರಿಯನ್ನು ಕಾಲೇಜಿನ ಪ್ರಾಂಶುಪಾಲರು ಗಮನಿಸುವಂತೆ ಸಭೆ ತೀರ್ಮಾನಿಸಿತು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್, ಉಪನ್ಯಾಸಕರಾದ ರಾಜು, ಪ್ರವೀಣ್, ಸಿಬ್ಬಂದಿಗಳಾದ ಧರ್ಮಪ್ಪ, ಜವರ, ರವಿ, ಭವ್ಯ ಉಪಸ್ಥಿತರಿದ್ದರು.

ಮಡಿಕೇರಿ: ಶಿಕ್ಷಕರು ತಮ್ಮ ಶಾಲೆಗಳಲ್ಲಿ ಇಕೋ ಕ್ಲಬ್‍ಗಳ ವತಿಯಿಂದ ವಿವಿಧ ಪರಿಸರ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು ಎಂದು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯತ್ರಿ ಕರೆ ನೀಡಿದರು.

‘ರಾಷ್ಟ್ರೀಯ ಹಸಿರು ಪಡೆ’ ಕಾರ್ಯಕ್ರಮದಡಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ), ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೆÉೀರಿ ವತಿಯಿಂದ ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನ ಇಕೋ ಕ್ಲಬ್‍ನ ಉಸ್ತುವಾರಿ ಶಿಕ್ಷಕರಿಗೆ ಗುರುವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಗಳ ಭೌತಿಕ ಪರಿಸರದೊಂದಿಗೆ ಶಾಲೆಗಳಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಶಾಲಾ ಕೈತೋಟ ಮತ್ತು ಶಾಲಾವನ ನಿರ್ಮಾಣ, ಶೌಚಾಲಯದ ಸ್ವಚ್ಛತೆಗೆ ಆದ್ಯತೆ ಹಾಗೂ ಶಾಲಾವರಣದಲ್ಲಿ ಗಿಡ-ಮರಗಳನ್ನು ಬೆಳೆಸಿ ಹಸಿರು ಪರಿಸರ ನಿರ್ಮಾಣ ಮಾಡುವ ಮೂಲಕ ಪರಿಸರ ಸ್ನೇಹಿ ಶಾಲೆಗಳನ್ನಾಗಿ ರೂಪಿಸಬೇಕು ಎಂದರು.

‘ಘನತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್, ಪರಿಸರ ಸಂರಕ್ಷಣೆಯು ಎಲ್ಲರ ಮೂಲಭೂತ ಕರ್ತವ್ಯವಾಗಿದ್ದು, ಘನತ್ಯಾಜ್ಯಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಮೂಲಕ ಸ್ವಚ್ಛ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.

ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಬಟ್ಟೆ, ಸೆಣಬು ಮತ್ತು ಕಾಗದದಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಪ್ಲಾಸ್ಟಿಕ್ ಮಾಲಿನ್ಯವನ್ನು ಹಿಮ್ಮೆಟ್ಟಿಸುವ ಕುರಿತು ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಪ್ಲಾಸ್ಟಿಕ್ ಬಳಕೆ ಮತ್ತು ಘನತ್ಯಾಜ್ಯಗಳಿಂದಾಗುವ ದುಷ್ಪರಿಣಾಮಗಳ ಕುರಿತು ಗಣೇಶನ್ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮಯೂರ ಉದಯ ಕರ್ವೇಕರ್ ‘ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಅರಣ್ಯೀಕರಣದ ಪ್ರಾಮುಖ್ಯತೆ’ ಕುರಿತು ಮಾಹಿತಿ ನೀಡಿದರು.

ರಾಷ್ಟ್ರೀಯ ಹಸಿರು ಪಡೆ ಯೋಜನೆಯ ಜಿಲ್ಲಾ ಕಾರ್ಯಕ್ರಮದ ಸಹಾಯಕ ಬಿ.ಬಿ.ರಕ್ಷಿತ್, ಶಾಲೆಗಳಲ್ಲಿ ಇಕೋ ಕ್ಲಬ್ (ಪರಿಸರ ಸಂಘ) ಗಳ ಮೂಲಕ ಪರಿಸರ ಕಾರ್ಯಕ್ರಮಗಳ ಸಂಘಟನೆ ಹಾಗೂ ಪರಿಸರ ಚಟುವಟಿಕೆಗಳನ್ನು ಕೈಗೊಳ್ಳುವ ಕುರಿತು ಮಾಹಿತಿ ನೀಡಿದರು.

ಮಡಿಕೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಚ್.ಜಿ ಪುಟ್ಟರಂಗನಾಥ್, ಎಂಪ್ರಿ ಸಂಸ್ಥೆಯ ಕಾರ್ಯಕ್ರಮ ಸಮನ್ವಯಾಧಿಕಾರಿ ಎ.ಹರೀಶ್ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪಿ.ಯು.ರಂಜಿತ್ ಇದ್ದರು.

ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಇಕೋ ಕ್ಲಬ್‍ಗಳ ಉಸ್ತುವಾರಿ ಶಿಕ್ಷಕರು ಪಾಲ್ಗೊಂಡಿದ್ದರು.

ಸುಂಟಿಕೊಪ್ಪ: ಸುಂಟಿಕೊಪ್ಪ ಗದ್ದೆಹಳ್ಳ ಬರೋಡ ಬ್ಯಾಂಕ್ ಶಾಖೆ ವತಿಯಿಂದ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಮಕ್ಕಳಿಗೆ ಗಣರಾಜ್ಯೋತ್ಸವದ ಸಲುವಾಗಿ ಕ್ರೀಡಾ ಸಾಮಗ್ರಿಗಳಾದ ಬ್ಯಾಡ್ಮಿಂಟನ್ ಬ್ಯಾಟ್, ಕ್ರಿಕೆಟ್ ಬ್ಯಾಟ್-ಬಾಲ್‍ಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭ ಬ್ಯಾಂಕ್ ಅಧಿಕಾರಿಗಳಾದ ರಾಜೇಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಎಲ್ಲಾ ಕ್ರೀಡೆಯಲ್ಲಿ ಭಾಗವಹಿಸಿ ದೇಶದ ಉತ್ತಮ ಕ್ರೀಡಾ ಪಟುವಾಗಿ ಹೊರಹೊಮ್ಮುವಂತೆ ಕಿವಿಮಾತು ಹೇಳಿದರು. ಅಧಿಕಾರಿಗಳಾದ ಜಯ ಜಿ. ಹೆಗ್ಡೆ, ಸತೀಶ್, ಸಿಬ್ಬಂದಿ ಸಂತೋಷ್, ರವಿ, ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳು ಹಾಜರಿದ್ದರು.ಕೂಡಿಗೆ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕೂಡಿಗೆಯ ಕ್ರೀಡಾ ಶಾಲೆಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು ಕೂಡಿಗೆ ಸರಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೂಡಿಗೆ ಕ್ರೀಡಾ ಶಾಲೆಗೆ ಸಂಬಂಧಿಸಿದಂತೆ ಅಥ್ಲೆಟಿಕ್ಸ್, ವಾಲಿಬಾಲ್, ಹಾಕಿ, ಫುಟ್‍ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಆಯ್ಕೆ ಮಾಡಲಾಯಿತು. ಈ ಸಂದರ್ಭ ಜಿಲ್ಲೆಯ ವಿವಿಧ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಕ್ರೀಡಾ ಶಾಲೆಯ ಅಂತೋಣಿ ಡಿಸೋಜ, ಬಿಂದು ಸೇರಿದಂತೆ ವಿವಿಧ ಕ್ರೀಡಾ ತರಬೇತಿದಾರರು ಭಾಗವಹಿಸಿದ್ದರು.

ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 121ನೇ ಜನ್ಮ ದಿನಾಚರಣೆಯನ್ನು ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಪುಷ್ಪಾಚರಣೆ ಮತ್ತು ಭಾವಚಿತ್ರ ಅನಾವರಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕೆ.ಎಂ. ನಾಚಪ್ಪ, ಎಲ್ಲರೂ ರಾಷ್ಟ್ರೀಯ ಐಕ್ಯತಾ ಮನೊಭಾವನೆಯನ್ನು ರೂಢಿಸಿಕೊಂಡು ಸೇನೆಗೆ ಸೇರಿ ಎಂದು ಕರೆ ನೀಡಿದರು. ಮಹಿಳೆಯರಿಗೂ ಸೇನೆಯಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಎಲ್ಲರೂ ಉತ್ತಮ ಜ್ಞಾನ ಹೊಂದಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿ ಉನ್ನತ ಸ್ಥಾನವನ್ನು ಅಲಂಕರಿಸಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಸೇವೆ ಸಾಧನೆಯನ್ನು ಹಾಗೂ ಅವರು ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಭಾರತೀಯ ಭದ್ರತಾ ವ್ಯವಸ್ಥೆಯನ್ನು ಮುನ್ನಡೆಸಿದರ ಬಗ್ಗೆ ವಿವರಿಸಿದರು. ಭಾರತ ವಿವಿಧ ಸಂಸ್ಕøತಿಯನ್ನು ಹೊಂದಿದ್ದರೂ ಎಲ್ಲರೂ ಭಾರತೀಯರೆಂಬ ಭಾವನೆಯನ್ನು ಮೈಗೂಡಿಸಿಕೊಂಡು ಐಕ್ಯತೆಯನ್ನು ಮೆರೆಯಬೇಕೆಂದು ಕರೆ ನೀಡಿದರು. ಸೇನೆಯಲ್ಲಿ ಮಾತ್ರ ಎಲ್ಲರೂ ಭಾರತೀಯರೆಂಬ ಐಕ್ಯತೆಯಿದ್ದು ಅದೇ ಮನೋಭಾವನೆಯನ್ನು ಎಲ್ಲರೂ ರೂಢಿಸಿಕೊಂಡು ದೇಶದ ಐಕ್ಯತೆಯನ್ನು ಕಾಪಾಡಬೇಕೆಂದು ಸಲಹೆ ನೀಡಿದರು.

ಪ್ರಾಂಶುಪಾಲರಾದ ಡಾ. ಸಿ. ಜಗತ್ ತಿಮ್ಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಶಿಸ್ತನ್ನು ಎಲ್ಲರೂ ಮೈಗೂಡಿಸಿಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಎನ್‍ಸಿಸಿ ಅಧಿಕಾರಿಯಾದ ಮೇಜರ್ ಡಾ. ರಾಘವ, ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ.ಇ.ತಿಪ್ಪೇಸ್ವಾಮಿ ಅವರು ಉಪಸ್ಥಿತರಿದ್ದರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಎನ್‍ಸಿಸಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವೀರಾಜಪೇಟೆ: ಇಲ್ಲಿನ ಕಾವೇರಿ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕøತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಇಟ್ಟಿರ ಕಮಲಾಕ್ಷಿ ವಹಿಸಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಕರ್ತಚಿರ ಕಾವೇರಮ್ಮ, ಮೂಕಚಂಡ ಕಾವೇರಮ್ಮ ಹಾಗೂ ಕಳ್ಳಿರ ಕುಸುಮ್ ಗಿರೀಶ್ ಪಾಲ್ಗೊಂಡಿದ್ದರು.

ಮೂಕಚಂಡ ಕಾವೇರಮ್ಮ ಮಾತನಾಡಿ, ನಾವು ಬಾಹ್ಯ ಸೌಂದರ್ಯದ ಬದಲು ಆಂತರಿಕ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಗುರು-ಹಿರಿಯರಿಗೆ ಗೌರವವನ್ನು ಸಲ್ಲಿಸಬೇಕೆಂದು ಕಿವಿಮಾತು ಹೇಳಿದರು. ಕರ್ತಚಿರ ಕಾವೇರಮ್ಮ ತಮ್ಮ ಭಾಷಣದಲ್ಲಿ ವಿದ್ಯಾಸಂಸ್ಥೆಯ ಏಳಿಗೆಯನ್ನು ಶ್ಲಾಘಿಸಿದರು. ಇರುವ ಸೌಕರ್ಯಗಳನ್ನು ಬಳಸಿಕೊಂಡು ಸಾಧನೆಯ ಮೆಟ್ಟಿಲೇರಲು ಪ್ರಯತ್ನಿಸಬೇಕೆಂದು ಹೇಳಿದರು.

ಪ್ರೊ. ಕಮಲಾಕ್ಷಿ ಅಧ್ಯಕ್ಷಿಯ ಭಾಷಣದಲ್ಲಿ ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಹೊಂದಿರಬೇಕು ಹಾಗೂ ಗುರಿ ಸಾಧಿಸಲು ಶ್ರಮಪಡಬೇಕೆಂದು ಕಿವಿಮಾತು ಹೇಳಿದರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಪುರುಷರ ಹಾಕಿ ತಂಡವನ್ನು ಅಂತರ್ ವಿಶ್ವವಿದ್ಯಾನಿಲಯ ಪಂದ್ಯಾಟದಲ್ಲಿ ಪ್ರತಿನಿಧಿಸಿದ ಕಾಲೇಜಿನ ಐವರು ಹಾಕಿ ಆಟಗಾರರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಮಾರ್ಗದರ್ಶಕಿ ವೀಣಾ ಕೆ.ಜಿ. ಮತ್ತು ಕರಣ್ ಕುಮಾರ್ ಹಾಗೂ ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕರಾದ ಡಾ. ಎಂ.ಎಂ. ದೇಚಮ್ಮ ಮತ್ತು ಎಂ.ಎ. ನಾಚಪ್ಪ ಉಪಸ್ಥಿತರಿದ್ದರು.

ಮಡಿಕೇರಿ: ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್ ರಿಬ್ಬನ್, ರೆಡ್ ಕ್ರಾಸ್, ಹಳೆಯ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಅಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಮಾತನಾಡಿ, ರಕ್ತದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದಿರಬೇಕು. ಶಸ್ತ್ರ ಚಿಕಿತ್ಸೆ, ಅಪಘಾತ ಮತ್ತು ಕ್ಯಾನ್ಸ್‍ರ್ ರೋಗಿಗಳಿಗೆ ಹೆಚ್ಚು ರಕ್ತದ ಅವಶ್ಯಕತೆ ಇರುತ್ತದೆ. ಸರಿಯಾದ ಸಮಯಕ್ಕೆ ರಕ್ತ ಸಿಗದಿರುವುದರಿಂದ ರೋಗಿಗಳು ಪ್ರಾಣವನ್ನು ಕಳೆದುಕೊಳುತ್ತಾರೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಕೆ.ಸಿ. ದಯಾನಂದ, ಇತಿಹಾಸ ಪ್ರಾಧ್ಯಾಪಕ ಶಶಿಧರ್ ಮಾತನಾಡಿದರು.

ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿ ದೀಕ್ಷಿತ್ ಗೌಡ ಹೆಚ್.ಎ. ನಿರೂಪಿಸಿ, ಶಿವ ಪ್ರಾರ್ಥಿಸಿದರು.ಮಡಿಕೇರಿ: ಪೋಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಬೇರೆ ಮಕ್ಕಳೊಡನೆ ತಮ್ಮ ಮಕ್ಕಳನ್ನು ಹೋಲಿಸುವ ಕಾರ್ಯವನ್ನು ಮಾಡಬಾರದು ಎಂದು ಜಿಲ್ಲಾ ಸಿವಿಲ್ ನ್ಯಾಯಧೀಶೆ ನೂರುನ್ನೀಸಾ ಸಲಹೆ ನೀಡಿದರು.

ಜಿಲ್ಲಾ ಬಾಲಭವನ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ಚಿತ್ರಕಲೆ ಮತ್ತು ಛದ್ಮವೇಷ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿರುವ ಕಲೆಯನ್ನು ಹೊರತರಲು ಇಂತಹ ವೇದಿಕೆಗಳು ಬಹು ಸಹಕಾರಿ ಎಂದರು. ಪೋಷಕರು ಮಕ್ಕಳಿಗೆ ಪ್ರಶಸ್ತಿಯನ್ನು ಪಡೆಯಲೇಬೇಕೆಂದು ಒತ್ತಡವನ್ನು ಹಾಕದೆ, ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ.ಡಬ್ಲ್ಯೂ.ಸಿ. ಅಧ್ಯಕ್ಷ ಸೂರಜ್ ಮಾತನಾಡಿ, ಕಲೆಯನ್ನು ಅನಾವರಣಗೊಳಿಸಲು ಈ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಬಾಲಮಂದಿರದ ಆಪ್ತ ಸಮಾಲೋಚಕ ನಾಗಭೂಷಣ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ, ಸಂಪನ್ಮೂಲ ವ್ಯಕ್ತಿಗಳಾದ ಭರತ್ ಕೋಡಿ, ಪ್ರಸನ್ನ, ಇಂದ್ರಾಣಿ, ರೇವತಿ ರಮೇಶ್, ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಸೇರಿದಂತೆ ಇತರರು ಭಾಗಿಯಾಗಿದ್ದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧೀಕ್ಷಕ ಮಹೇಶ್ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ವಂದಿಸಿದರು.

ನಾಪೆÇೀಕ್ಲು: ಯವಕಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 71ನೇ ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯವಕಪಾಡಿ ಕಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತಮ್ಮಯ್ಯ ಉದ್ಘಾಟಿಸಿದರು. ನಂತರ ಕಕ್ಕಬೆ ಕ್ಲಸ್ಟರ್ ವಿಭಾಗದ 5 ಶಾಲೆಗಳ ನಡುವೆ ಅಂತರ ಶಾಲಾ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯ ಧರ್ಮೇಂದ್ರ, ಸ್ಥಳೀಯರಾದ ಪಾಂಡಂಡ ಸಚಿನ್, ಗ್ರಾಮಸ್ಥರು ಇದ್ದರು.

ವೀರಾಜಪೇಟೆ: ವಿದ್ಯಾರ್ಥಿ ಜೀವನವು ಅತ್ಯಂತ ಪ್ರಮುಖ ಮತ್ತು ತಮ್ಮ ಏಳಿಗೆಯನ್ನು ನಿರ್ಧರಿಸುವ ಅವದಿಯಾಗಿದೆ. ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಿವೃತ್ತ ಮೇಜರ್ ಜನರಲ್ ಕುಪ್ಪಂಡ ಪಿ. ನಂಜಪ್ಪ ನುಡಿದರು.

ವೀರಾಜಪೇಟೆಯ ಕಾವೇರಿ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಚಿರಿಯಪಂಡ ಉತ್ತಪ್ಪ, ನೆಕ್ಟರ್ ಫ್ರೆಶ್ ಸಂಸ್ಥೆಯ ಮಾಲೀಕರಾದ ಛಾಯ ನಂಜಪ್ಪ, ರಾಜಪ್ಪ ಉಪಸ್ಥಿತರಿದ್ದರು.

ಛಾಯ ನಂಜಪ್ಪ ಮಾತನಾಡಿ, ತಾವು ಕಷ್ಟದ ಸಂಕೋಲೆಯಿಂದ ಬಿಡಿಸಿಕೊಂಡು ಯಶಸ್ವಿ ಜೀವನಕಟ್ಟಿಕೊಂಡ ಪ್ರೇರಣಾತ್ಮಕ ಅನುಭವವನ್ನು ಹಂಚಿಕೊಂಡರು. ಚಿರಿಯಪಂಡ ಉತ್ತಪ್ಪ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಸಕರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪಣತೊಡಬೇಕೆಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಇಟ್ಟಿರ ಕಮಲಾಕ್ಷಿ, ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ವೀಣಾ ಕೆ.ಜಿ. ಮತ್ತು ಕರಣ್ ಕುಮಾರ್ ಹಾಜರಿದ್ದರು.

ನಿವೃತ್ತಿ ಹೊಂದುತ್ತಿರುವ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಎಂ.ಎಂ. ದೇಚಮ್ಮ ಹಾಗೂ ಪಿ.ಹೆಚ್‍ಡಿ ಪದವಿ ಪಡೆದಿರುವ ಕನ್ನಡ ಉಪನ್ಯಾಸಕಿ ಡಾ. ರೇವತಿ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಆಕರ್ಷಣೀಯ ಸಾಂಸ್ಕøತಿಕ ಕಾರ್ಯಕ್ರಮ ಮೂಡಿಬಂತು.

ಮಡಿಕೇರಿ: ಪರೀಕ್ಷೆ ಎಂದರೆ ಅದು ಭೂತವಲ್ಲ, ಅದರ ಕುರಿತು ಯೋಚಿಸಿ ಭಯಪಡಬಾರದು. ಅದನ್ನು ಒಂದು ಹಬ್ಬವೆಂದು ಭಾವಿಸಿ ಸಂಭ್ರಮಿಸಬೇಕು ಎಂದು ಪ್ರಸಿದ್ಧ ವ್ಯಕ್ತಿತ್ವ ವಿಕಸನರ ತರಬೇತುದಾರ ಚೇತನ್ರಾಮ ವಿದ್ಯಾರ್ಥಿಗಳಿಗೆ ಕಿವಿಮಾ�?