ನಾಪೆÇೀಕ್ಲು, ಫೆ. 1: ನಾಪೆÇೀಕ್ಲು ನಗರದಿಂದ ಬೇತು-ಪಾರಾಣೆಗಾಗಿ ವೀರಾಜಪೇಟೆಗೆ ಹೋಗುವ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಿ ತಿಂಗಳುಗಳೇ ಕಳೆದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಸ್ತೆಯ ಅಗಲೀಕರಣದಿಂದ ಮಣ್ಣು ತೆಗೆದಿದ್ದು ಮತ್ತು ಬೇತು ಗ್ರಾಮದ ರಸ್ತೆಯಲ್ಲಿ ಮೋರಿಯನ್ನು ನಿರ್ಮಾಣ ಮಾಡಿ ಇದರ ದೂಳಿನ ಮಣ್ಣು ದಾರಿಹೋಕರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆಯುಂಟು ಮಾಡುತ್ತಿದೆ. ಮಕ್ಕಳು ಧರಿಸುವ ಬಿಳಿ ಬಣ್ಣದ ಸಮವಸ್ತ್ರ ಶಾಲೆ ತಲಪುವ ವೇಳೆಗೆ ಹಳದಿ ಬಣ್ಣವಾಗಿರುತ್ತದೆ ಎಂದು ದೂರಿರುವ ಸಾರ್ವಜನಿಕರು ಕೂಡಲೇ ಶಾಸಕರು ಗುತ್ತಿಗೆದಾರರಿಗೆ ಕಾಮಗಾರಿಯನ್ನು ಮುಗಿಸಲು ಆದೇಶಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.