ಜನರ ಆಶೋತ್ತರಗಳಿಗೆ ಸ್ಪಂದಿಸಿದೆ : ರಂಜನ್

ಕೇಂದ್ರ ಸರ್ಕಾರ ರೈತರ ಪರ, ದಲಿತರ ಪರ, ಜನಪರವಾದಂತಹ ಅತ್ಯುತ್ತಮ ಬಜೆಟನ್ನು ಮಂಡಿಸಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸಿದೆ ಎಂದು ಶಾಸಕ ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಧಾನಕರ ಬಜೆಟ್ : ಕೆಜಿಬಿ

ಭಾರತದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೃಷಿಗೆ ಒತ್ತು ನೀಡುವ ಮೂಲಕ ಹಲವಾರು ಜನಪರ ಯೋಜನೆಗಳೊಂದಿಗೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದ್ದು, ಈ ಬಜೆಟ್ ಎಲ್ಲರಿಗೂ ಸಮಾಧಾನಕರ ಹಾಗೂ ಸ್ವಾಗತಾರ್ಹ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

ನಿರಾಶದಾಯಕ ಬಜೆಟ್ : ವೀಣಾ

ಕೇಂದ್ರ ಸರ್ಕಾರದ ಮೇಲೆ ಜನರು ಇಟ್ಟಿದ್ದ ನಿರೀಕ್ಷೆಗಳು ಹುಸಿಯಾಗಿವೆ. ಜನಪರವಾದ ಬಜೆಟ್ ಮಂಡಿಸುವ ಬದಲು ಕೇಂದ್ರ ಸರ್ಕಾರ ಗೊಂದಲಮಯ ಬಜೆಟ್ ಮಂಡನೆ ಮೂಲಕ ಜನರ ಕಣ್ಣೀರೊರೆಸುವ ನಾಟಕವಾಡಿದ್ದು, ನಿರಾಶದಾಯಕ ಬಜೆಟ್ ಮಂಡಿಸಿದೆ ಎಂದು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿಪ್ರಾಯಿಸಿದರು.

ಉತ್ತಮ ಬಜೆಟ್ : ಸುನಿಲ್

ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯನ್ನಿಟ್ಟುಕೊಂಡು ಮುನ್ನಡೆಯುತ್ತಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉತ್ತಮವಾದ ಬಜೆಟನ್ನು ಮಂಡನೆ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.