ಸೋಮವಾರಪೇಟೆ, ಫೆ. 1: ತಾಲೂಕಿನ ಮನೆಹಳ್ಳಿ ಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಿಲ್ವ ಗೋಶಾಲೆಯ ಲೋಕಾರ್ಪಣೆ ಕಾರ್ಯಕ್ರಮ ತಾ. 5 ರಂದು ನಡೆಯಲಿದೆ ಎಂದು ತಪೋಕ್ಷೇತ್ರ ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಬಡುಬನಹಳ್ಳಿ ನಿವಾಸಿ ಬೆಂಗಳೂರಿನಲ್ಲಿ ನೆಲೆಸಿರುವ ಡಾ. ಬಿ.ಎಂ. ಲತಾ ಮತ್ತು ಕುಟುಂಬಸ್ಥರು ನಿರ್ಮಿಸಿಕೊಟ್ಟಿರುವ ಬಿಲ್ವ ಗೋಶಾಲೆಯ ಉದ್ಘಾಟನೆ ತಾ. 5 ರಂದು ಪೂರ್ವಾಹ್ನ 9 ಗಂಟೆಗೆ ಮಠದ ಆವರಣದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ದಾನಿಗಳಾದ ಡಾ. ಬಿ.ಎಂ. ಲತಾ, ಡಾ.ಲಹರಿ, ಸರಳಾಕ್ಷಿ ಬಸಪ್ಪ ಹಾಗೂ ಬಿ.ಆರ್. ಮಲ್ಲಪ್ಪರವರ ಕುಟುಂಬಸ್ಥರು ಆಗಮಿಸಲಿದ್ದಾರೆ ಎಂದು ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.