ಗುಡ್ಡೆಹೊಸೂರು, ಫೆ. 1: ಇಲ್ಲಿಗೆ ಸಮೀಪದ ಮಾದಪಟ್ಟಣದ ಪ್ರಾಥಮಿಕ ಶಾಲೆಯಲ್ಲಿ ಕಸವಿಲೇವಾರಿ ಬಗ್ಗೆ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಲಾಗಿತ್ತು.

ಹಸಿಕಸ ಮತ್ತು ಒಣಕಸವನ್ನು ಮನೆಯ ಹಂತದಲ್ಲಿ ಬೇರ್ಪಡಿಸಿ, ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ವಾಹನಕ್ಕೆ ನೀಡುವಂತೆ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು, ಪಿ.ಡಿ.ಓ. ಶ್ಯಾಂ ಮತ್ತು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.

ಈ ಸಂದರ್ಭ ಶ್ಯಾಂ ಮಾತನಾಡಿ, ತಮ್ಮ ಮನೆಯಲ್ಲಿರುವ ಹಸಿ ಕಸವನ್ನು ಬೇರ್ಪಡಿಸಿ ತಮ್ಮ ಸಿಬ್ಬಂದಿಗಳು ಮನೆಯ ಬಾಗಿಲಿಗೆ ಬಂದ ಸಂದರ್ಭ ನೀಡುವಂತೆ ಮನವಿ ಮಾಡಿದರು.