ಚೆಟ್ಟಳ್ಳಿ, ಫೆ. 1: ಪಾಲಿಬೆಟ್ಟ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 13 ಅಭ್ಯರ್ಥಿಗಳು ಸ್ಪರ್ಧಿಸಿ ಜಯಶೀಲರಾಗಿದ್ದಾರೆ.

ಪಾಲಿಬೆಟ್ಟದ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಚುನಾವಣೆ ಮತದಾನದ ಪ್ರಕ್ರಿಯೆಯಲ್ಲಿ ಕುಟ್ಟಂಡ ಅಜಿತ್ ಕರುಂಬಯ್ಯ, ಅನಿತಾ ಸುರೇಶ್, ಡಾಲು, ತಮ್ಮಯ್ಯ, ಪವಿತ್ರ, ಶ್ಯಾಮ್ ಚಂದ್ರ, ಸುಮೇಶ್, ಶುಭಾಷಿಣಿ, ಶೋಭಾ, ಗಣೇಶ್, ಯಶೋದ, ದಿನೇಶ್, ಧರ್ಮಜ ಉತ್ತಪ್ಪ ಜಯ ಗಳಿಸಿದ್ದಾರೆ

ಪ್ರತಿಸ್ಪರ್ಧಿಗಳಾಗಿ ಸ್ಪರ್ಧಿಸಿದ ಹತ್ತು ಮಂದಿ ಸೋಲನುಭವಿಸಿದ್ದಾರೆ. ಸಹಕಾರ ಸಂಘದ ತಾಲೂಕು ಅಧಿಕಾರಿ ಮೋಹನ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಗೆಲವು ಸಾಧಿಸಲು ಕಾರಣಕರ್ತರಾದ ಸಹಕಾರ ಸಂಘದ ಮತದಾರರು ಹಾಗೂ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನ ಅಧ್ಯಕ್ಷ ವಿಜು ಸುಬ್ರಮಣಿ ಅಭಿನಂದಿಸಿದರು.