ವೀರಾಜಪೇಟೆ, ಜ.31: ಕಳೆದ ಎರಡು ವರ್ಷಗಳ ಹಿಂದೆ ಗೋಣಿಕೊಪ್ಪಲಿನ ಕುಕ್ಕೆ ವ್ಯಾಪಾರಿ ರಮೇಶ್ ಎಂಬಾತನ ಕತ್ತನ್ನು ಕುಯ್ದು ಕೊಲೆ ಮಾಡಿದ ಆರೋಪದ ಮೇರೆ ಇಬ್ಬರು ಆರೋಪಿಗಳ ವಿಚಾರಣೆ ನಡೆಸಿದ ಇಲ್ಲಿನ ಅಧಿಕ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಬ್ಬರನ್ನು ಕೊಲೆ ಆರೋಪದಿಂದ ದೋಷಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.

ಗೋಣಿಕೊಪ್ಪಲಿನ ಆಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿಯ ಸಹೋದರ ರಮೇಶ್ ಎಂಬಾತನ ಮೃತದೇಹ ತಾ. 22.8.17ರಂದು ಮುಂಜಾನೆ ಗೋಣಿಕೊಪ್ಪಲಿನ ಬೈಪಾಸ್ ರಸ್ತೆಯ ಬದಿಯಲ್ಲಿ ನಿಂತಿದ್ದ ಗೂಡ್ಸ್ ಆಟೋ ರಿಕ್ಷಾದಲ್ಲಿ ಕತ್ತನ್ನು ಕುಯ್ದ ರೀತಿಯಲ್ಲಿ ಪತ್ತೆಯಾಗಿತ್ತು. ಗೋಣಿಕೊಪ್ಪ ಪೊಲೀಸರು, ಕೊಲೆ ಪ್ರಕರಣದ ತನಿಖೆ ನಡೆಸಿ ಕೊಲೆ ಆರೋಪದ ನಾರಾಯಣ ಹಾಗೂ ಇದಕ್ಕೆ ಸಹಕರಿಸಿದ ಮನೋಜ್ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳ ಪರ ಬಿ.ಎಸ್.ಪುಷ್ಪರಾಜ್ ಹಾಗೂ ವಿ.ಎಸ್.ಪ್ರೀತಂ ವಾದಿಸಿದರು.