ಗೋಣಿಕೊಪ್ಪ ವರದಿ, ಜ. 27: ತಿತಿಮತಿ ಗ್ರಾಮ ಪಂಚಾಯಿತಿ ಹಾಗೂ ಸ್ವಚ್ಛ ಭಾರತ್ ಮಿಷನ್ ಸಹಯೋಗದಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸುಮಾರು ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಒಣಕಸ ವಿಲೇವಾರಿ ಘಟಕವನ್ನು ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಇ. ಶಿವಕುಮಾರ್ ಉದ್ಘಾಟಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜ ಮಾತನಾಡಿ, ಉಳಿದ ಒಣಕಸವನ್ನು ಪಂಚಾಯಿತಿ ಕಸ ವಿಲೇವಾರಿ ವಾಹನಕ್ಕೆ ನೀಡುವ ಮೂಲಕ ಕಸ ನಿರ್ಮೂಲನೆಗೆ ಕೈಜೋಡಿಸಬೇಕು ಎಂದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಆಶಾಜೇಮ್ಸ್, ಪಂಚಾಯಿತಿ ಉಪಾಧ್ಯಕ್ಷ ರಶಿ, ಪಿಡಿಒ ಮಮತಾ, ಕಾರ್ಯದರ್ಶಿ ಗಿರೀಶ್‍ಕುಮಾರ್, ಸ್ಥಳೀಯ ಪ್ರಮುಖರಾದ ಚೆಪ್ಪುಡೀರ ರಾಮಕೃಷ್ಣ, ಚೆಪ್ಪುಡೀರ ಕಾರ್ಯಪ್ಪ, ಸ್ವಚ್ಛಭಾರತ್ ಮಿಷನ್ ಸಂಚಾಲಕ ಸೂರಜ್, ಸಂತೋಷ್ ಇದ್ದರು