ವೀರಾಜಪೇಟೆ, ಜ. 27: ಸಮಾಜದಲ್ಲಿ ಇಂದಿನ ವಿದ್ಯುತ್‍ನ ಸಮಸೈಯ ಅಭಾವಗಳನ್ನು ಎದುರಿಸಲು ಸೌರ ವಿದ್ಯುತ್ ಸಹಕಾರಿಯಾಗಿದೆ. ವಿದ್ಯುತ್ ಅಭಾವ ಇರುವ ಪ್ರದೇಶಗಳಲ್ಲಿ ಇಂತಹ ಸೌರ ವಿದ್ಯುತ್ ಸೌಲಭ್ಯವನ್ನು ಬಳಸ ಬಹುದಾಗಿದೆ. ವೀರಾಜಪೇಟೆಯ ಮಗ್ಗುಲದಲ್ಲಿರುವ ದಂತ ವೈದ್ಯ ಮಹಾ ವಿದ್ಯಾ ಸಂಸ್ಥೆಯ ಸೌರ ವಿದ್ಯುತ್‍ನ ನೂತನ ಘಟಕದ ವಿದ್ಯುತ್ ಉತ್ಪಾದನೆ ಇತರ ದೊಡ್ಡ ಸಂಸ್ಥೆಗಳಿಗೆ ಮಾದರಿಯಾಗಲಿದೆ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ದಂತ ಮಹಾ ವಿದ್ಯಾಲಯದಲ್ಲಿ ರೂ. 90ಲಕ್ಷ ವೆಚ್ಚದಲ್ಲಿ ಸೌರ ವಿದ್ಯುತ್ ಉತ್ಪಾದನೆ ಘಟಕವನ್ನು ಉದ್ಘಾಟಿಸಿದ ಬೋಪಯ್ಯ ಈ ಘಟಕ 150 ಕಿ.ಲೋ ವ್ಯಾಟ್ಸ್ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು ಒಂದು ವರ್ಷಕ್ಕೆ 1,80,000 ಕ್ಕೂ ಅಧಿಕ ಯುನಿಟ್ ವಿದ್ಯುತ್‍ನ್ನು ಉತ್ಪಾದಿಸುತ್ತದೆ. ಸಂಸ್ಥೆ ಈ ವಿದ್ಯುತ್ ಅನ್ನು ಬಳಸಿ ಉಳಿಕೆಯಾದ ವಿದ್ಯುತ್ ಅನ್ನು ಚೆಸ್ಕಾಂ ಖರೀದಿಸಲಿದೆ. ದಂತ ವೈದ್ಯ ಕಾಲೇಜಿನ ಶೇಕಡ 80ರಷ್ಟು ವಿದ್ಯುತ್‍ನ್ನು ಈ ಘಟಕ ಪೊರೈಸಲಿದೆ. ಇದರಿಂದ ಸಂಸ್ಥೆಯು ವಿದ್ಯುತ್ ಅಭಾವವನ್ನು ನೀಗಲಿದೆ. ಇಂದು ಈ ಆಧುನಿಕ ಸೋಲಾರ್ ವ್ಯವಸ್ಥೆಯಿಂದ ಮಕ್ಕಳ ವಿದ್ಯಾರ್ಜನೆಗೂ ಸೌಲಭ್ಯವಾಗಲಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಡೀನ್ ಡಾ. ಸುನೀಲ್ ಮುದ್ದಯ್ಯ, ಬೆಂಗಳೂರಿನ ಅಮ್ರಾನ್, ಸೌರ ವಿದ್ಯುತ್ ಕಂಪೆನಿಯ ರಘುನಂದನ್, ಗಣೇಶ್, ಡಾ. ಶಶಿಧರ್, ಪ್ರಾಂಶುಪಾಲ ಡಾ. ಕೆ.ಸಿ. ಪೊನ್ನಪ್ಪ, ಮತ್ತಿತರರು ಹಾಜರಿದ್ದರು.