ಶನಿವಾರಸಂತೆ, ಜ. 27: ಸಮೀಪದ ನಿಡ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ.31 ಹಾಗೂ ಫೆ. 1 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ಪೂರ್ವಭಾವಿ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಸಮ್ಮೇಳನದ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳು ಕಾರ್ಯಚಟು ವಟಿಕೆಗಳನ್ನು ಚುರುಕುಗೊಳಿಸಬೇಕಿದೆ. ಆಹ್ವಾನ ಪತ್ರಿಕೆಯಲ್ಲಿ ಆಗಿರುವ ಲೋಷದೋಷಗಳನ್ನು ಪರಿಗಣಿಸದೆ ಗ್ರಾಮಸ್ಥರು, ಕನ್ನಡಾಭಿಮಾನಿಗಳು ಸಮ್ಮೇಳನದÀ ಯಶಸ್ಸಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ವೇದಿಕೆ ಕಾರ್ಯಕ್ರಮ ವಿವಿಧ ಗೋಷ್ಠಿಗಳ ನಿರ್ವಹಣೆ, ಗ್ರಾಮೀಣ ಕ್ರೀಡೆ, ರಂಗೋಲಿ ಸ್ಪರ್ಧೆ, ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ, ಸಾಂಸ್ಕøತಿಕ ಕಾರ್ಯಕ್ರಮ ಇತ್ಯಾದಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಮುಖರಾದ ಅಶ್ವಥ್ ಕುಮಾರ್, ಮುರಳೀಧರ್, ಬಿ.ಬಿ. ನಾಗರಾಜ್, ಪ್ರಸನ್ನ, ಹರೀಶ್‍ಕುಮಾರ್, ಎನ್.ಬಿ. ನಾಗಪ್ಪ, ಎಚ್.ಪಿ. ಶೇಷಾದ್ರಿ, ಸುಬ್ಬಪ್ಪ, ಡಿ.ಬಿ. ಧರ್ಮಪ್ಪ, ಜವರ, ಎಚ್.ಬಿ. ಜಯಮ್ಮ, ಕ.ಸಾ.ಪ. ಜಿಲ್ಲಾ, ತಾಲೂಕು, ಹೋಬಳಿ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.