ಗೋಣಿಕೊಪ್ಪ ವರದಿ, ಜ. 25: ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ಡಿವೈಎಸ್ಪಿಯಾಗಿರುವ ಅಮ್ಮಂಡ ಜಿ. ಕಾರ್ಯಪ್ಪ ಅವರು ರಾಷ್ಟ್ರಪತಿ ಪೊಲೀಸ್ ಪದಕ ಮೆಡಲ್ ಪಾರ್ ಮೆರಿಟೋರಿಯಸ್ ಸರ್ವಿಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಇವರಿಗೆ 2007 ರಲ್ಲಿ ಮುಖ್ಯಮಂತ್ರಿಗಳ ಪದಕ ಲಭಿಸಿತ್ತು. ಪೊಲೀಸ್ ಇಲಾಖೆಯಲ್ಲಿ ಇವರು 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಬೆಂಗಳೂರು ಲೋಕಾಯುಕ್ತದ ವಿಶೇಷ ತನಿಖಾ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.