ಗೋಣಿಕೊಪ್ಪ ವರದಿ, ಜ. 25: ಜಿಲ್ಲೆಯಲ್ಲಿ ತಾ.26 ರಿಂದ (ಇಂದಿನಿಂದ) ತಾ. 29ರವರೆಗೆ ಈಗಿನ ತಾಪಮಾನಕ್ಕಿಂತ ಸಣ್ಣಮಟ್ಟದಲ್ಲಿ ಏರಿಳಿತ ಕಾಣಬಹುದಾಗಿದೆ.ಕೆಲವೊಂದು ಕಡೆಗಳಲ್ಲಿ ಮಂಜು ಮುಸುಕಿನ ವಾತಾವರಣವಿದ್ದು, ತಾ. 27 ಹಾಗೂ 28 ರಂದು ಮಡಿಕೇರಿ ತಾಲೂಕು ವ್ಯಾಪ್ತಿಯ ಅಲ್ಲಲ್ಲಿ ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಉಳಿದ ಕಡೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ಘಟಕ ಪ್ರಕಟಣೆ ತಿಳಿಸಿದೆ. ತಾಲೂಕುವಾರು ವಿವರ : ವೀರಾಜಪೇಟೆ ತಾಲೂಕಿನಲ್ಲಿ ತಾ.26 ರಂದು ಕನಿಷ್ಟ 17 ಡಿಗ್ರಿ ಸೆಲ್ಸಿಯಸ್, ಗರಿಷ್ಠ 32 ಡಿಗ್ರಿ ಸೆಲ್ಸಿಯಸ್, 27 ರಂದು ಕನಿಷ್ಟ 18, ಗರಿಷ್ಠ 33, 28 ರಂದು 20 (ಕ), 32 (ಗ), 29 ರಂದು 20 (ಕ), 31 (ಗ) ತಾಪಮಾನ ಇರಲಿದೆ.
ಮಡಿಕೇರಿ ತಾಲೂಕಿನಲ್ಲಿ ತಾ. 26 ರಂದು ಕನಿಷ್ಟ 16, ಗರಿಷ್ಠ 32, ತಾ. 27 ರಂದು 17 (ಕ), 33 (ಗ), 28 ರಂದು 18 (ಕ), 32 (ಗ), 29 ರಂದು 19 (ಕ), 31 (ಗ). ಜ. 27 ಹಾಗೂ 28 ರಂದು ಸಣ್ಣ ಮಳೆ ಬೀಳುವ ಸಾಧ್ಯತೆ ಇದೆ.
ಸೋಮವಾರಪೇಟೆ ತಾಲೂಕಿನಲ್ಲಿ ತಾ. 26 ರಂದು ಕನಿಷ್ಟ 14, ಗರಿಷ್ಠ 31, ತಾ. 27 ರಂದು 15 (ಕ), 31 (ಗ), 28 ರಂದು 16 (ಕ), 32 (ಗ), 29 ರಂದು 16 (ಕ), 31 (ಗ) ತಾಪಮಾನ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.