ಪೊನ್ನಂಪೇಟೆ, ಜ. 24: ಇಲ್ಲಿನ ಜೆ.ಸಿ.ಐ.ನ ಪೊನ್ನಂಪೇಟೆ ಗೋಲ್ಡನ್ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಇತ್ತೀಚೆಗೆ ನೆರವೇರಿತು. ನೂತನ ಅಧ್ಯಕ್ಷರಾಗಿ ಗಯಾ ಜೋಯಪ್ಪ ಅಧಿಕಾರ ಸ್ವೀಕರಿಸಿದರು.

ಜೆ.ಸಿ. ಸಂಸ್ಥೆಯ ವಲಯ 14ರ ಅಧ್ಯಕ್ಷೆ ಸಮಂತಾ ಮಿಸ್ಕ್ಯುತ್ ಗಯಾ ಜೋಯಪ್ಪ ಅವರಿಗೆ ಪ್ರದಾನ ಮಾಡಿದರು. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಸಮಾರಂಭದಲ್ಲಿ ಮೈಸೂರಿನ ವೈದ್ಯೆ ಡಾ. ಸೋನಿಯಾ ಮಂದಪ್ಪ ಭಾಗವಹಿಸಿದ್ದರು. ಈ ಸಂದರ್ಭ ಜೆ.ಸಿ.ಐ.ನ ಸಿ ಪ್ರಾಂತ್ಯದ ವಲಯ ಉಪಾಧ್ಯಕ್ಷ ಪುನೀತ್ ಆಯ್ಕೆಯಾದ ನೂತನ ಸದಸ್ಯರಾದ ಅರಮಾಣಮಾಡ ಅಜಯ್, ತೀತರಮಾಡ ಗಗನ್ ಅಪ್ಪಯ್ಯ ಮತ್ತು ಕಡೆಯಮಾಡ ಬೋಪಣ್ಣ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯದರ್ಶಿಯಾಗಿ ಜೆಸಿ ಮತ್ರಂಡ ಬೋಪಣ್ಣ, ಜೆಸಿಆರ್‍ಟಿ ಅಧ್ಯಕ್ಷೆಯಾಗಿ ಮಂಡಂಗಡ ಪುನಿತ, ಜೆಜೆಸಿ ಅಧ್ಯಕ್ಷರಾಗಿ ಎಂ.ಎ. ಲವಿತ್ ಮುತ್ತಣ್ಣ ಪ್ರಮಾಣ ವಚನ ಸ್ವೀಕರಿಸಿದರು. ಘಟಕದ ಕೋಶಾಧಿಕಾರಿಯಾಗಿ ಜೆಸಿ ಕೆ.ಎ. ಗಿರಿ, ಉಪಾಧ್ಯಕ್ಷರಾಗಿ ದಿಲನ್ ಚಂಗಪ್ಪ, ಸತೀಶ್ ಕಡೆಮಾಡ, ಡಿನ್ಸು, ಡ್ಯಾನಿ, ನಾಣಯ್ಯ ಹಾಗೂ ನಿರ್ದೇಶಕರಾಗಿ ಕಾಡ್ಯಮಾಡ ಮುದ್ದಪ್ಪ, ಪಿ.ಎಸ್. ಉತ್ತಪ್ಪ, ಸಿ.ಪಿ. ಬೋಪಣ್ಣ, ಪವಿ ಪೊನ್ನಪ್ಪ ಅಧಿಕಾರ ಸ್ವೀಕರಿಸಿದರು. ಸಮಾರಂಭದಲ್ಲಿ 2019ನೇ ಸಾಲಿನ ಅಧ್ಯಕ್ಷೆ ಕಾವ್ಯ ಸಂಜು, ಜೇಸಿ ರಾಷ್ಟ್ರೀಯ ಮುಖ್ಯ ವಾಹಿನಿಯಾದ ಚಾಲೆಂಜಸ್ ಸಂಪಾದಕೀಯ ಮಂಡಳಿಯ ಸದಸ್ಯೆಯಾಗಿ ಆಯ್ಕೆಯಾದ ಹಿನ್ನೆಲೆ ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಘಟಕದ 2019ನೇ ಸಾಲಿನ ಅಧ್ಯಕ್ಷೆ ಕಾವ್ಯ ಸಂಜು ವಹಿಸಿದ್ದರು. ಲವಿತ ಮುತ್ತಣ್ಣ ಜೇಸಿ ವಾಣಿ ವಾಚಿಸಿದರು. ಘಟಕದ ಅಧ್ಯಕ್ಷರು ಸ್ವಾಗತಿಸಿ, ಎಂ.ಬಿ. ಬೋಪಣ್ಣ ವಂದಿಸಿದರು.