ಶನಿವಾರಸಂತೆ, ಜ. 24: ಕೊಡ್ಲಿಪೇಟೆ, ಬ್ಯಾಡಗೊಟ್ಟ, ಬೆಸೂರು, ಹಂಡ್ಲಿ ವಲಯಗಳ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕೊಡ್ಲಿ ಪೇಟೆಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಔರಂಗಜೇಬ್ ವಹಿಸಿದ್ದರು. ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಉದ್ಘಾಟನಾ ಭಾಷಣ ಮಾಡಿದರು..
ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾದ್ಯಕ್ಷ ಹಸ್ಯೆನಾರ್ ಹಾಜಿ, ಜಿಲ್ಲಾ ಮುಖಂಡ ಕೆ.ಎಂ. ಲೋಕೇಶ್ ಸಭೆಯನ್ನು ಉದ್ದೇಶಿಸಿ ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದರು.
ದಲಿತ ಮತ್ತು ಅಲ್ಪಸಂಖ್ಯಾತರಿಗೆ ಸಮಸ್ಯೆಗಳಾದಾಗ ಪ್ರಾಮಾಣಿಕವಾಗಿ ಹೋರಾಟ ಮಾಡದ ಬಗ್ಗೆ ಜಿಲ್ಲಾ ಅಧÀ್ಯಕ್ಷರನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು..
ಚುನಾವಣೆ ಆಗಮಿಸಿದಾಗ ಮಾತ್ರ ಸಭೆಗಳನ್ನು ನಡೆಸುವುದನ್ನು ಬಿಟ್ಟು ನಿರಂತವಾಗಿ ಪಕ್ಷದ ಸಭೆಗಳನ್ನು ನಡೆಸಿ ಕಾರ್ಯಕರ್ತರ ಕುಂದು ಕೊರತೆಗಳಿಗೆ ಸ್ಪಂದಿಸಬೇಕೆಂದು ಕಾರ್ಯಕರ್ತರು ಸಭೆಯಲ್ಲಿ ಆಗ್ರಹಿಸಿದರು. ನೂತನ ಬ್ಲಾಕ್ ಅದ್ಯಕ್ಷ ಅನಂತ್ಕುಮಾರ್ ಮಾತನಾಡಿ, ತಳ ಮಟ್ಟದಿಂದ ಪಕ್ಷ ಸಂಘಟಿಸಿ ಕಾರ್ಯ ಕರ್ತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದಾಗಿ ಹೇಳಿದರು.
ಕೊಡ್ಲಿಪೇಟೆ ವಲಯಾದ್ಯಕ್ಷರಾದ ಔರಂಗಜೇಬ್ ಮಾತನಾಡಿ, ಕೊಡ್ಲಿಪೇಟೆ, ಬೆಸೂರು, ಬ್ಯಾಡಗೊಟ್ಟ ವಲಯಗಳನ್ನು ಕುಶಾಲನಗರ ಬ್ಲಾಕಿನಿಂದ ವಿಂಗಡಿಸಿ ಸೋಮವಾರ ಪೇಟೆ ಬ್ಲಾಕ್ಗೆ ಸೇರಿಸುವಂತೆ ಬೇಡಿಕೆ ಸಲ್ಲಿಸಲಾಯಿತು.
ವ್ಯೆದ್ಯಕೀಯ ಘಟಕದ ಜಿಲ್ಲಾಧÀ್ಯಕ್ಷ ಡಾ.ಉದಯ್ ಕುಮಾರ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧÀ್ಯಕ್ಷ ಉಸ್ಮಾನ್, ಬ್ಲಾಕ್ ಅಧÀ್ಯಕ್ಷ ಶಾಹಿದ್, ಮುಖಂಡರುಗಳಾದ ಅಬ್ಬಾಸ್ ಹಾಜಿ, ಜೆ.ಆರ್. ಪಾಲಾಕ್ಷ ಕಾಂತರಾಜ್ ಗುಡುಗಳಲೆ ಮತ್ತಿತರರು ಹಾಜರಿದ್ದರು. ಕೊಡ್ಲಿಪೇಟೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಮತ್ತು ಹಂಡ್ಲಿ ಬ್ಯಾಕ್ನಿಂದ ಜಯಗಳಿಸಿದವರನ್ನು ಸನ್ಮಾನಿಸಲಾಯಿತು. ಜನಾರ್ದನ್ ಸ್ವಾಗತಿಸಿ, ವಂದಿಸಿದರು.