ಮಡಿಕೇರಿ, ಜ. 24: ಪ್ರಾಥಮಿಕ ಆರೋಗ್ಯ ಕೇಂದ್ರ ಕಾನೂರಿನಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಕಾನೂರು ಗ್ರಾ.ಪಂ. ಅಧ್ಯಕ್ಷೆ ಲತಾಕುಮಾರಿ ಉದ್ಘಾಟನೆ ಮಾಡಿದರು.
ಮೊದಲ ದಿನದ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಯಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಹಮದ್ ಆಶಿಕ್ ಹಾಗೂ ಆಡಳಿತ ಅಧಿಕಾರಿಗಳು ವಿಶ್ವನಾಥ್ ಸಿ.ವಿ. ಮತ್ತು ಊರಿನ ಗ್ರಾಮಸ್ಥರು ಜೊತೆಗೆ ಸಿಬ್ಬಂದಿಗಳು ಹಾಜರಿದ್ದರು.