ವೀರಾಜಪೇಟೆ, ಜ. 23: ವೀರಾಜಪೇಟೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ಪ್ರತಿಷ್ಠಿತ ಚುನಾವಣೆಯಲ್ಲಿ ಎರಡು ಗುಂಪಿನ ನಡುವೆ ನೇರ ಸ್ಪರ್ಧೆ ಏರ್ಪಟ್ಟು ಅಮ್ಮಣಿಚಂಡ ರಾಜಾ ನಂಜಪ್ಪ ಅವರ ಗುಂಪು ಎಂಟು ಸ್ಥಾನಗಳನ್ನು ಗಳಿಸಿದರೆ, ಬೊಳ್ಳಚಂಡ ಗಣಪತಿ ಅವರ ಗುಂಪು ಐದು ಸ್ಥಾನಗಳನ್ನು ಗಳಿಸಿ ತೃಪ್ತಿಪಟ್ಟುಕೊಂಡಿದೆ.

ಸಹಕಾರ ಸಂಘದ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ ಅಮ್ಮಣಿಚಂಡ ರಾಜಾ ನಂಜಪ್ಪ 157, ಕರ್ನಂಡ ಯು.ಜಯ, 150, ತಾತಂಡ ಬಿಪಿನ್ ಕಾವೇರಪ್ಪ 128, ಮಂಡೇಪಂಡ ಚಿಟ್ಟಿಯಪ್ಪ 126, ವಾಟೇರಿರ ಪ್ರೇಮ್ ನಾಣಯ್ಯ 126, ಕುಂಡ್ರಂಡ ದೇವಯ್ಯ 120, ಮಹಿಳಾ ಮೀಸಲು ಕ್ಷೇತ್ರದಿಂದ ಮಂಡೇಪಂಡ ಸಾವಿತ್ರಿ 135, ಕುಂಡ್ರಂಡ ಭವ್ಯ 114, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಎಚ್.ಎನ್. ನಂದ 118, ಹಿಂದುಳಿದ ಕ್ಷೇತ್ರದಿಂದ ಟಿ.ಡಿ.ವಾಸು 132, ಐರೀರ ಎಂ. ಸೋಮಯ್ಯ 111, ಸಾಲಗಾರರಲ್ಲದ ಕ್ಷೇತ್ರದಿಂದ ಪುಟ್ಟಿಚಂಡ ಟಿ.ನರೇಂದ್ರ 26 ಮತಗಳನ್ನು ಗಳಿಸಿ ಜಯ ಸಾಧಿಸಿದ್ದಾರೆ. ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಎಂ.ಬಿ.ಭಾರತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದೇ ಸಹಕಾರ ಸಂಘಕ್ಕೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬೊಳ್ಳಚಂಡ ಗಣಪತಿ 110, ಸಿ.ಕೆ. ಪೊನ್ನಪ್ಪ 91, ಪಾಲೇಕಂಡ ಪೊನ್ನಪ್ಪ 97, ಅನ್ನೇರ್‍ಕಂಡ ಬೋಪಣ್ಣ 84, ವಾಟೇರಿರ ಬೋಪಣ್ಣ 109, ಚೋಕಂಡ ಎಂ. ಮಂದಣ್ಣ 103, ಹಿಂದುಳಿದ ಮೀಸಲು ಕ್ಷೇತ್ರದಿಂದ ಐರಿರ ತಮ್ಮುಣ್ಣಿ 107, ಕೆ.ಎಂ. ಹುಸೇನ್ 86 ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಪಾಲೇಕಂಡ ಸಿ. ಕಾವೇರಮ್ಮ 108, ಮೇಕತಂಡ ರಾಧಾ ರುಕ್ಮಿಣಿ 113, ಪರಿಶಿಷ್ಟ ಜಾತಿ ವರ್ಗದಿಂದ ಎಚ್.ಎನ್. ಕಸ್ತೂರಿ 112 ಮತಳನ್ನು ಗಳಿಸಿ ಪರಾಭವಗೊಂಡಿದ್ದಾರೆ. ಸಂಘದ ಆಡಳಿತ ಮಂಡಳಿಯ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಭಾರತಿ ಅವಿರೋಧವಾಗಿ ಆಯ್ಕೆಗೊಂಡು ದರಿಂದ ಆಡಳಿತ ಮಂಡಳಿಯ 13 ಸ್ಥಾನಗಳ ಪೈಕಿ 12 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು.

ಈ ಕೃಷಿ ಸಹಕಾರ ಸಂಘದಲ್ಲಿ 940 ಮಂದಿ ಸದಸ್ಯರುಗಳಿದ್ದು 286 ಮಂದಿ ಮತ ಹಾಕುವ ಅರ್ಹತೆ ಪಡೆದಿದ್ದರು. ಈ ಪೈಕಿ 274 ಮತಗಳು ಚಲಾವಣೆಯಾಗಿದ್ದು, ಮತ ಎಣಿಕೆ ಸಂದರ್ಭದಲ್ಲಿ 35 ಮತಗಳು ಕುಲಗೆಟ್ಟಿದ್ದವು.