ಕೋಮು ಸೌಹಾರ್ದತೆಗೆ ಹೊಸ ಉದಾಹರಣೆ ಎಂಬಂತೆ, ಕೇರಳದ ಅಲೆಪ್ಪಿಯ ಚೆರುವಲ್ಲಿ ಮುಸ್ಲಿಂ ಜಮಾತ್‍ನ ಮಸೀದಿಯಲ್ಲಿ ಹಿಂದೂ ಜೋಡಿಯ ವಿವಾಹವೊಂದು ಇತ್ತೀಚೆಗೆ ಜರುಗಿದೆ.

ಮಸೀದಿಯ ಆಡಳಿತ ಮಂಡಳಿಯೇ ಆಯೋಜಿಸಿದ್ದ ಈ ಮದುವೆಯಲ್ಲಿ ಹಿಂದೂ ಸಮುದಾಯದ ಅಂಜು ಮತ್ತು ಶರತ್ ಎಂಬ ಯುವಜೋಡಿ, ತಮ್ಮ ಬಂಧು-ಮಿತ್ರರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದೆ.

ನವಜೋಡಿಗೆ ಮಸೀದಿ ಆಡಳಿತ ಮಂಡಳಿ 8 ಪವನ್ ಚಿನ್ನವನ್ನು ಉಡುಗೊರೆಯಾಗಿ ನೀಡಿದೆ.

ವಧು ಅಂಜುವಿನ ಮನೆಯವರು ಮದುವೆಯ ಖರ್ಚನ್ನೂ ನಿಭಾಯಿಸದಷ್ಟು ಬಡವರಾಗಿದ್ದ ಹಿನ್ನೆಲೆಯಲ್ಲಿ, ಅವರ ಕಷ್ಟಕ್ಕೆ ಸ್ಪಂದಿಸಿರುವ ಮಸೀದಿಯ ಆಡಳಿತ ಮಂಡಳಿ ಈ ಮದುವೆ ನೆರವೇರಿಸಿಕೊಟ್ಟಿದೆ. ಈ ಒಂದು ವಿವಾಹ ಹಿಂದೂ ಮುಸ್ಲಿಮರ ನಡುವೆ ಇರುವ ಒಗ್ಗಟ್ಟನ್ನು ಸಾರಿದೆ. ಸಮಾಜದ ಇತರರಿಗೆ ಮಾದರಿ ಎನಿಸಿದೆ.