ವೀರಾಜಪೇಟೆ, ಜ. 23: ಕಳೆದ ನಾಲ್ಕು ದಿನಗಳ ಹಿಂದೆ ತಾಯಿ, ಮಗಳನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿ ಬಾವಿಗೆ ಎಸೆಯಲಾಗಿದ್ದ ಮೃತ ದೇಹಗಳು ಇಂದು ಕೊಳತ್ತೋಡು ಬೈಗೋಡು ಗ್ರಾಮದ ಪ್ರಾಥಮಿಕ ಶಾಲೆಯ ಬಳಿಯಲ್ಲಿರುವ ಕುಡಿಯುವ ನೀರಿನ ಬಾವಿಯಲ್ಲಿ ಪತ್ತೆಯಾಗಿದೆ.ಕೊಳತ್ತೋಡು ಗ್ರಾಮದ ಎಂ.ಕೆ.ದೇವಯ್ಯ ಎಂಬವರ ಕಾಫಿ ತೋಟಕ್ಕೆ ಕೆಲಸಕ್ಕೆಂದು ಹದಿನೈದು ದಿನಗಳ ಹಿಂದೆ ಬಂದಿದ್ದ ಆಲಿ ಎಂಬಾತ ತನ್ನ ಪತ್ನಿ, ಮಗಳೊಂದಿಗೆ ತೋಟದ ಕೆಲಸ ಮಾಡುತ್ತಿದ್ದನು.