ಮಡಿಕೇರಿ, ಜ. 23: ಅನ್ಸಾರುಲ್ ಇಸ್ಲಾಂ ಜಮಾಅತ್ ವತಿಯಿಂದ ಕಂಬಿಬಾಣೆಯಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶೈಖುನ ಕಾಕು ಉಪ್ಪಾಪ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಹೊಂದಿರುವ ಬಹು ಉಮರ್ ಫೈಝಿಯವರ ಒಂಭತ್ತನೇ ವರ್ಷದ ಉರೂಸ್ ಹಾಗೂ ಸ್ವಲಾತ್ ವಾರ್ಷಿಕೋತ್ಸವ ತಾ. 25 ರಿಂದ 27 ರವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ಜಮಾಅತ್‍ನ ಖತೀಬ ರಝಾಕ್ ಸಅದಿ, ತಾ. 24 ರಂದು ಜುಮಾ ನಮಾಝ್‍ನ ಬಳಿಕ ಜಮಾಅತ್‍ನ ಅಧ್ಯಕ್ಷ ಪಿ.ಕೆ. ಹಸನ್ ಧ್ವಜಾರೋಹಣ ನೆರವೇರಿಸುವ ಮೂಲಕ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ ಎಂದರು.

ತಾ. 25 ರಂದು ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ (ಕಿಲ್ಲೂರ್ ತಂಙಳ್) ಅವರ ನೇತೃತ್ವದಲ್ಲಿ ಮಗ್ರಿಬ್ ನಮಾಝ್‍ನ ಬಳಿಕ ಸ್ವಲಾತ್ ವಾರ್ಷಿಕೋತ್ಸವ ನಡೆಯಲಿದ್ದು, ಕಂಬಿಬಾಣೆಯ ಅನ್ಸಾರುಲ್ ಇಸ್ಲಾಂ ಜಮಾಅತ್‍ನ ಖತೀಬರಾದ ರಝಾಕ್ ಸಅದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಂಬಿಬಾಣೆ ಉರೂಸ್ ಕಮಿಟಿ ಅಧ್ಯಕ್ಷ ಕೆ. ಇಬ್ರಾಹಿಂ ವಹಿಸಲಿದ್ದಾರೆ ಎಂದು ತಿಳಿಸಿದರು.

ತಾ. 26 ರಂದು ಮಗ್ರಿಬ್ ನಮಾಝ್ ಬಳಿಕ ಧಾರ್ಮಿಕ ಪ್ರವಚನ ನಡೆಯಲಿದ್ದು, ಕಂಬಿಬಾಣೆ ಅನ್ಸಾರುಲ್ ಇಸ್ಲಾಂ ಜಮಾಅತ್‍ನ ಖತೀಬ ರಝಾಕ್ ಸಅದಿ ಉದ್ಘಾಟಿಸಲಿದ್ದಾರೆ. ಶಾಖಿರ್ ಬಾಖವಿ ಮಂಬಾಡ್ ಮತ ಪ್ರಭಾಷಣ ಮಾಡಲಿದ್ದು, ಅಧ್ಯಕ್ಷತೆಯನ್ನು ಕಂಬಿಬಾಣೆ ಅನ್ಸಾರುಲ್ ಇಸ್ಲಾಂ ಜಮಾಅತ್ ಗೌರವ ಅಧ್ಯಕ್ಷ ವಿ.ಎ. ಮಮ್ಮದಾಲಿ ಹಾಜಿ ವಹಿಸಲಿದ್ದಾರೆ ಎಂದರು.

ತಾ. 27 ರಂದು ಬೆಳಿಗ್ಗೆ 11.30ಕ್ಕೆ ಕಾಸರಗೋಡಿನ ಶೈಖುನ ಆಲಿಕುಂಞÂ ಮುಸ್ಲಿಯಾರ್ ಶಿರಿಯಾ ಅವರ ನೇತೃತ್ವದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯನ್ನು ಕೊಡಗು ಜಿಲ್ಲಾ ವಕ್ಫ್ ಬೋರ್ಡ್‍ನ ಸದಸ್ಯ ಅಬ್ದುಲ್ ಹಮೀದ್ ಮುಸ್ಲಿಯಾರ್ ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಕಂಬಿಬಾಣೆ ಅನ್ಸಾರುಲ್ ಇಸ್ಲಾಂ ಜಮಾಅತ್ ಅಧ್ಯಕ್ಷ ಪಿ.ಕೆ. ಹಸನ್ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಕೊಡಗು ಜಿಲ್ಲಾ ಕಾಝಿ ಕೆ.ಎ. ಮಹಮೂದ್ ಮುಸ್ಲಿಯಾರ್, ಕೊಡಗು ಜಿಲ್ಲಾ ಸಮಸ್ತ ಕಾಝಿ ಎಂ.ಎಂ. ಅಬ್ದುಲ್ಲ ಫೈಝಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ. ಯಾಕೂಬ್, ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಅಂದು ಮಧ್ಯಾಹ್ನ 2.30ಕ್ಕೆ ಅನ್ನದಾನ ನಡೆಯಲಿದ್ದು, ಮಹಿಳೆಯರಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಲಾಗಿದೆ. ಸರ್ವರು ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ರಝಾಕ್ ಸಅದಿ ಮನವಿ ಮಾಡಿದರು.

ಗೋಷ್ಠಿಯಲ್ಲಿ ಕಂಬಿಬಾಣೆ ಉರೂಸ್ ಸಮಿತಿ ಅಧ್ಯಕ್ಷ ಕೆ. ಇಬ್ರಾಹಿಂ, ಅನ್ಸಾರುಲ್ ಇಸ್ಲಾಂ ಮದರಸದ ಸದರ್ ಮುಅಲ್ಲೀಂ ನಜುಮುದ್ದೀನ್, ಗೌರವ ಅಧ್ಯಕ್ಷ ವಿ.ಎ. ಮೊಹಮ್ಮದ್ ಆಲಿ ಹಾಗೂ ಕಾರ್ಯದರ್ಶಿ ಯು. ಅಬ್ದುಲ್ ಕಬೀರ್ ಉಪಸ್ಥಿತರಿದ್ದರು.