ನಾಪೋಕ್ಲು, ಜ. 23: ಎಮ್ಮೆಮಾಡು ಗ್ರಾಮದ ಕೂರುಳಿಯ ಇಆನತ್ತುದ್ದೀನ್ ಸ್ವಲಾತ್ ಸಮಿತಿ ವತಿಯಿಂದ 10ನೇ ವಾರ್ಷಿಕ ಮಹಾ ಸಮ್ಮೇಳನ ನಡೆಯಿತು. ಸಮ್ಮೇಳನದಲ್ಲಿ ಸೊಲಾತ್ ಮಜ್ಲೀಸ್ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಬಹುಸೈದ್ ಜಲಾಲುದ್ದೀನ್ ತಂಞಳ್ ದುಗ್ಗಲಡ್ಕ ಅವರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಕೂರುಳಿ ಅಹಮದ್ ಅವರ ಪುತ್ರಿ ಕದೀಜ ಮತ್ತು ಅಬ್ದುಲ್ ರೆಹಮಾನ್ ಅವರ ಪುತ್ರ ಜಕ್ರಿಯಾ ಹಾಗೂ ಪಳ್ಳಿರಾಣೆ ಜಮಾಯತ್‍ನ ಸಾದುಲಿ ಅವರ ಪುತ್ರ ಪಿ.ಎಸ್. ಸಲೀಂ ಮುಸ್ಲಿಯಾರ್ ಹಾಗೂ ಮಮ್ಮು ಅವರ ಪುತ್ರಿ ರಾಬಿಯ ಅವರ ನಡುವೆ ವಿವಾಹ ನೆರವೇರಿತು. ವಿವಾಹಿತ ಜೋಡಿಗೆ ನಾಲ್ಕು ಪವನ್ ಚಿನ್ನವನ್ನು ನೀಡಲಾಯಿತು.

ಎಮ್ಮೆಮಾಡಿನ ಕೋಯಮ್ಮ ತಂಞಳ್ ಅಲ್‍ಹೈದರುಸಿ, ಅಬ್ದುಲ್ ಅಜೀಜ್ ತಂಞಳ್ ಅಲ್‍ಹೈದುರುಸಿ ಎಮ್ಮೆಮಾಡು ಟಿಐಎಂಜೆ ಅಧ್ಯಕ್ಷ ಕೆ.ಎಸ್. ಖಾದಿರ್ ಹಾಜಿ, ಶಹೀದಿಯ ಅನಾಥಾಲಯದ ಅಧ್ಯಕ್ಷ ಸಿ.ಎ. ಹಸೈನಾರ್ ಕಾರ್ಯದರ್ಶಿ ಸಿ.ಎ. ಮೂಸಾ ಸೊಲಾತ್ ಸಮಿತಿ ಸದಸ್ಯ ಕೆ.ಎ. ಅಬ್ದುಲ್ಲ ಪರಂಬು ಮದರಸದ ಪಿ.ಎಸ್. ಮಹಮದ್ ಮುಸ್ಲಿಯಾರ್, ಸಿ.ಎಂ. ಮೊಹಮದ್ ಅಜ್‍ಹರಿ ವೇದಿಕೆಯಲ್ಲಿದ್ದರು. ಎಮ್ಮೆಮಾಡು ಟಿಐಎಂಜೆ ಕಾರ್ಯದರ್ಶಿ ಇಬ್ರಾಹಿಂ ಸಾದಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉಮ್ಮರ್ ಸಖಾಫಿ ಉದ್ಘಾಟಿಸಿದರು. ಸೊಲಾತ್ ಸಮಿತಿ ಅಧ್ಯಕ್ಷ ಕೆ.ಎ. ಮಾಹಿನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಸೊಲಾತ್ ಸಮಿತಿ ಕಾರ್ಯದರ್ಶಿ ಬಿ.ಎಂ. ಉಮ್ಮರ್ ವಂದಿಸಿದರು. ಮದರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ ಏರ್ಪಡಿಸಲಾಗಿತ್ತು. ಬಳಿಕ ಅನ್ನದಾನ ನೆರವೇರಿತು. - ದುಗ್ಗಳ