ಮಡಿಕೇರಿ, ಜ. 23: ಸೋಮವಾರಪೇಟೆ ತಾಲೂಕು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಸರ್ವೆ.ನಂ 1/1ರ ನವಗ್ರಾಮ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗದಲ್ಲಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಪ್ರಸ್ತಾವನೆ ಬಂದಿದ್ದು, ಈ ಬಗ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸೋಮವಾರಪೇಟೆ ಉಪ ವಿಭಾಗ, ಸೋಮವಾರಪೇಟೆ ಹಾಗೂ ವಲಯ ಅರಣ್ಯಾಧಿಕಾರಿ, ಕುಶಾಲನಗರ ವಲಯ, ಕುಶಾಲನಗರ ಅವರು ನಾಟಕ್ಕೆ ಯೋಗ್ಯವಾದ ವಿವಿಧ ಜಾತಿಯ ಒಟ್ಟು 73 ಹಸಿನಿಂತ ಮರಗಳಿಂದ ಅಂದಾಜು 28.116 ಘ.ಮೀ ಇರುವುದಾಗಿ ಹಾಗೂ ಸೌದೆಗೆ ಯೋಗ್ಯವಾದ ವಿವಿಧ ಜಾತಿಯ ಒಟ್ಟು 75 ಮರಗಳಿಂದ ಅಂದಾಜು 24.350 ಘ.ಮೀ ಸೌದೆ ದೊರೆಯಬಹುದಾಗಿ ವರದಿ ನೀಡಿರುತ್ತಾರೆ. ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ನಿಯಮದಡಿ 50ಕ್ಕೂ ಹೆಚ್ಚಿನ ಮರಗಳನ್ನು ಯಾವುದೇ ಸಾರ್ವಜನಿಕ ಉದ್ದೇಶಕ್ಕೆ ತೆರೆವುಗೊಳಿಸುವುದಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ. ಈ ಸಂಬಂಧ ಮಡಿಕೇರಿ ಅರಣ್ಯ ಭವನದಲ್ಲಿ ಗುರುವಾರ ಸಭೆ ನಡೆಯಿತು.