ಮಡಿಕೇರಿ, ಜ. 23: ಮಂಗಳೂರು ವಿಶ್ವ ವಿದ್ಯಾಲಯ 2018-19ನೇ ಸಾಲಿನಲ್ಲಿ ನಡೆಸಿದ ಎಂಬಿಎ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕೊಡಗಿನ ಎಂ.ಜಿ. ಮೌನವಿ 3ನೇ ರ್ಯಾಂಕ್ ಪಡೆದಿದ್ದಾಳೆ. ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಕಾಲೇಜಿನಲ್ಲಿ ಪದವಿ ಪಡೆದಿರುವ ಮೌನವಿ ಶನಿವಾರಸಂತೆ ಸಮೀಪದ ಮೂದ್ರವಳ್ಳಿಯ ನಾಟಿ ವೈದ್ಯ ಎಂ.ಪಿ. ಗಣೇಶ್-ಸವಿತಾ ದಂಪತಿಗಳ ಪುತ್ರಿ.