ಮಡಿಕೇರಿ, ಜ. 21: ಕೇಂದ್ರೀಯ ಸೈನಿಕ ಮತ್ತು ಪುನರ್ವಸತಿ ಇಲಾಖೆಯ ಹಿರಿಯ ಅಧಿಕಾರಿಗಳ 4ನೇ ದಕ್ಷಿಣ ವಲಯ ಸಮಾವೇಶ ತಾ. 22 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಸೈನಿಕ ಮತ್ತು ಪುನರ್ವಸತಿ ಕಚೇರಿಯಲ್ಲಿ ಹಾಗೂ ತಾ. 23 ರಂದು ಬೆಳಿಗ್ಗೆ 8.30 ಗಂಟೆಗೆ ವೀರಾಜಪೇಟೆಯ ಮಹಿಳಾ ಸಮಾಜ ಕಟ್ಟಡದಲ್ಲಿ ಸಮಾವೇಶ ನಡೆಯಲಿದೆ.

ಸಮಾವೇಶದಲ್ಲಿ ಡಿಜಿಆರ್, ಇಸಿಎಚ್‍ಎಸ್ ಹಾಗೂ ಸಿಎಸ್‍ಡಿ ಕ್ಯಾಂಟಿನ್‍ಗಳ ನಿರ್ದೇಶಕರು ಪಾಲ್ಗೊಳ್ಳÀಲಿದ್ದಾರೆ. ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ಭಾಗವಹಿಸಿ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವಂತೆ ಸೈನಿಕ ಕಲ್ಯಾಣ, ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕಿ ಗೀತಾ ಕೋರಿದ್ದಾರೆ.