ಸುಂಟಿಕೊಪ್ಪ, ಜ. 21: ಇಲ್ಲಿನ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್‍ಬೈಲು ಫ್ರೆಂಡ್ಸ್ ಯುವಕ ಸಂಘದ ನೂತನ ವ್ಯಾಯಾಮ ಶಾಲೆ ಕಟ್ಟಡವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿ ದರು. ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್‍ಬೈಲ್‍ನಲ್ಲಿ ಗ್ರಾಮ ವಿಕಾಸ್ ಯೋಜನೆಯಡಿ ರೂ. 7 ಲಕ್ಷ ವೆಚ್ಚದ ಜಿಮ್ ಕಟ್ಟಡ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಸಕರ ಕ್ಷೇತ್ರಕ್ಕೆ ಸುಮಾರು ರೂ. 75 ಲಕ್ಷ ಗ್ರಾಮ ವಿಕಾಸ್ ಯೋಜನೆಯಡಿ ಬಿಡುಗಡೆಯಾಗಿದ್ದು ಎಲ್ಲಾ ಕಡೆ ರಸ್ತೆ ಸೇರಿದಂತೆ ಸಮಾನವಾಗಿ ವಿಂಗಡಿಸಲಾಗಿದೆ. ಕಾನ್‍ಬೈಲು ಫ್ರೆಂಡ್ಸ್ ಯುವಕ ಸಂಘ ಮತ್ತು ಹೊದ್ದೂರು ಸಂಘ ಉತ್ತಮವಾಗಿ ಕಾರ್ಯನಿರ್ವ ಹಿಸುತ್ತಿದ್ದು ಗ್ರಾಮಾಭಿವೃದ್ಧಿಯ ಚಿಂತನೆ ನಡೆಸಬೇಕು ಸರಕಾರದ ಸೌಲಭ್ಯವನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು. ಕಾನ್‍ಬೈಲ್‍ನಿಂದ ಅಂದಗೋವೆಗಾಗಿ ಸುಂಟಿಕೊಪ್ಪಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆ ಅಭಿವೃದ್ಧಿಗೆ ಬೇಡಿಕೆಯಲ್ಲಿದ್ದು ಮಳೆಹಾನಿಯಲ್ಲಿ ರಸ್ತೆ ಅಭಿವೃದ್ಧಿಗೆ ರೂ. 23 ಲಕ್ಷ ಮತ್ತು ವಿಶೇಷ ಪ್ಯಾಕೇಜಿನಡಿ ರೂ. 5 ಲಕ್ಷ ಒಟ್ಟು ರೂ. 28 ಲಕ್ಷ ನೀಡಲಾಗಿದೆ. ಅಲ್ಲದೆ ಹೇರೂರು ಗ್ರಾಮದ 2 ರಸ್ತೆಗೆ ಸೇರಿ ರೂ. 10 ಲಕ್ಷ ಶಾಸಕರ ಅನುದಾನ ದಲ್ಲಿ ನೀಡಲಾಗಿದೆ. ಸುಂಟಿಕೊಪ್ಪ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಾಷ್ಟ್ರೀಯ ಹೆದ್ದಾರಿಯಿಂದ ಎಮ್ಮೆಗುಂಡಿಗಾಗಿ ಕಾನ್‍ಬೈಲುಗೆ ತೆರಳುವ ರಸ್ತೆಯನ್ನು ರೂ. 6 ಕೋಟಿ ವೆಚ್ಚದಲ್ಲಿ ನೂತನ ರಸ್ತೆಯಾಗಲಿದ್ದು ಇದರಿಂದ ಕಾನ್‍ಬೈಲ್‍ನಿಂದ ಸುಂಟಿಕೊಪ್ಪಕ್ಕೆ ಎರಡುವರೆ ಕಿ.ಮೀ. ಗ್ರಾಮಸ್ಥರಿಗೆ ಹತ್ತಿರವಾಗಲಿದೆ ಎಂದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ವಸಂತ ಕುಮಾರ್ ಮಾತನಾಡಿ ಶಾಸಕರಿಂದ ಸುಮಾರು ರೂ. 75 ಲಕ್ಷ ಈ ಗ್ರಾಮಕ್ಕೆ ಬಿಡುಗಡೆ ಯಾಗಿರುವುದು ಹೆಮ್ಮೆ ಎಂದರು. ಜಿಮ್ ಕಟ್ಟಡದ ಕೆಲಸ ನಿರ್ವಹಿಸಿದ ಗುತ್ತಿಗೆದಾರ ಪವನ್ ಕುಮಾರ್ ಅವರನ್ನು ಶಾಸಕರು ಸನ್ಮಾನಿಸಿದರು.
ವೇದಿಕೆಯಲ್ಲಿ ನಾಕೂರು-ಶಿರಂಗಾಲ ಗ್ರಾ.ಪಂ. ಅಧ್ಯಕ್ಷೆ ರಂಜಿನಿ, ಉಪಾಧ್ಯಕ್ಷೆ ಯಶೋದ, ವಸಂತ ಕುಮಾರ್, ಬಿಜು, ಇಂಜಿನಿಯರ್ ಫಾಯಸ್ ಉಪಸ್ಥಿತರಿದ್ದರು. ಪಿ.ಡಿ.ಓ ಗೂಳಪ್ಪ ಕೂತಿನಾರ್ ಸ್ವಾಗತಿಸಿ, ವಂದಿಸಿದರು.