ಆಲೂರು ಸಿದ್ದಾಪುರ, ಜ. 21: ಆಲೂರುಸಿದ್ದಾಪುರ ಸಾಯಿ ಎಜುಕೇಷನ್ ಟ್ರಸ್ಟ್ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯ 14ನೇ ವಾರ್ಷಿಕೋತ್ಸವ ತಾ. 23 ಮತ್ತು 24 ರಂದು ನಡೆಯಲಿದೆ. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾಸಂಸ್ಥೆ ವತಿಯಿಂದ ಗ್ರಾಮೀಣ ಸೊಗಡು ಅಂತರ್ ಶಾಲಾ ಲಗೋರಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ ಎಂದು ವಿದ್ಯಾಸಂಸ್ಥೆ ಪ್ರಕಟಣೆ ತಿಳಿಸಿದೆ.

ಆಟದ ನಿಯಮಗಳು: ಒಂದು ತಂಡದಲ್ಲಿ 7+1 ಆಟಗಾರರಿಗೆ ಮಾತ್ರ ಅವಕಾಶ ಇರುತ್ತದೆ, ಒಂದೆ ತಂಡದಲ್ಲಿ ಬಾಲಕ ಮತ್ತು ಬಾಲಕಿಯರು ಮಿಶ್ರ ತಂಡ ಅಥವಾ ಪ್ರತೇಕ ತಂಡಗಳಾಗಿ ಭಾಗವಹಿಸಬಹುದು, ಜೂನಿಯರ್ ಹಂತದಲ್ಲಿ ಮತ್ತು ಸಿನಿಯರ್ ಹಂತದಲ್ಲಿ ಹಾಗೂ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಸೀನಿಯರ್ ಹಂತದಲ್ಲಿ ಭಾಗವಹಿಸಬಹುದು ಮತ್ತು ಲಗೋರಿ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ತಾ. 23 ರಂದು (ನಾಳೆ) ಬೆಳಿಗ್ಗೆ 9.30ಕ್ಕೆ ಹೆಸರು ನೊಂದಾಯಿಸಿಕೊಳ್ಳಬಹುದು.