ಮಡಿಕೇರಿ, ಜ.20 : ಬದುಕಿನ ಮೌಲ್ಯಗಳನ್ನು ಹೇಳುವುದಕ್ಕಿಂತ ಅನುಸರಿಸಿ ನಿರೂಪಿಸುವುದೇ ಸೂಕ್ತ ಎಂದು ಹೆಸರಾಂತ ಸಾಹಿತಿ ಡಾ.ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.ಮಡಿಕೇರಿ ಲಯನ್ಸ್ ಕ್ಲಬ್ ವತಿಯಿಂದ ಕ್ಯಾಪಿಟಲ್ ವಿಲೇಜ್ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಪ್ರಾಂತೀಯ ಸಮ್ಮೇಳನದಲ್ಲಿ ಬದುಕಿನಲ್ಲಿ ಕೊಡುವುದರಲ್ಲಿರುವ ಸಂತೋಷ ಎಂಬ ವಿಚಾರದ ಕುರಿತು ಮಾತನಾಡಿದ ಡಾ.ಗುರುರಾಜ ಕರಜಗಿ, ಬಾಯಿಯಲ್ಲಿ ಹೇಳುವುದು ಮೌಲ್ಯವಲ್ಲ, ಹೇಳಿದ ಮೌಲ್ಯಗಳನ್ನು ಜೀವನದಲ್ಲಿ ಪಾಲಿಸಿ ತೋರಿಸುವುದೇ ನಿಜವಾದ ಮೌಲ್ಯ ಎಂದರು. ಹಲವರು ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡುತ್ತಾರೆ. ಹೀಗಿರುವಾಗ ನಾವು ಗಳಿಸಿದ್ದರಲ್ಲಿ ಕೊಂಚವ ನ್ನಾದರೂ ಇತರರ ಏಳಿಗೆಗಾಗಿ ತ್ಯಾಗ ಮಾಡುವುದು ಅಗತ್ಯ ಎಂದು ಪ್ರತಿಪಾದಿಸಿದರಲ್ಲದೆ, ಕೊಡುವುದ ರಿಂದಾಗಿ ಯಾವುದೇ ನೋವು ಉಂಟಾಗಲಾರದು. ನಮ್ಮಲ್ಲಿರುವ ಹಲವು ಸಂಪತ್ತಿನ ಪೈಕಿ ಕೆಲವ ನ್ನಾದರೂ ಇತರರಿಗಾಗಿ ನೀಡಿದಾಗ ಮನಸ್ಸಿಗೆ ದೊರಕುವ ಸಂತೋಷ ಅವರ್ಣನೀಯ ಎಂದರು.ಯಾರಾದರೂ ಉತ್ತಮವಾದ ಕೆಲಸ ಮಾಡಿದಾಗ ಅವರನ್ನು ಮನಸ್ಸಾರೆ ಶ್ಲಾಘಿಸುವುದು ಕೂಡ ಕೊಡುಗೆಯೇ ಎಂದು ವಿಶ್ಲೇಷಿಸಿದ ಕರಜಗಿ, ದಾನ ನೀಡುವ ಸಂದರ್ಭ ದಾನ ಪಡೆದಾತ ನೀವು ನೀಡಿದ್ದನ್ನು ಸದಾ ಸ್ಮರಿಸುವಂತಿರಲಿ. ಮನಸ್ಸಿಲ್ಲದ ಮನಸ್ಸಿನಿಂದ ಯಾರದ್ದೋ ಒತ್ತಾಯಕ್ಕೆ ಮಣಿದು ನೀಡುವುದಕ್ಕಿಂತ ಪ್ರತಿಯೋರ್ವರು ತಮ್ಮ ಮನಸಾರೆ ಅಗತ್ಯವುಳ್ಳವರಿಗೆ ಉಪಯುಕ್ತ ಎನಿಸುವ ಕೊಡುಗೆ ನೀಡಿ ಎಂದು ಕರೆ ನೀಡಿದರು. ದಾನ ನೀಡುವುದು ಖಂಡಿತಾ ಉಪಕಾರ ಅಲ್ಲ, ನಮ್ಮ ಜೀವನದ ಪರಿಪೂರ್ಣತೆಯ ಸಂಕೇತ ಅದಾಗಿದೆ ಎಂದು ಹೇಳಿದ ಡಾ. ಕರಜಗಿ, ಕೊಡುಗೆ ದೊಡ್ಡದೇ ಇರಬೇಕು ಎಂದೇನಿಲ್ಲ. ನಿಮ್ಮ ಕೈಲಾದ ಕೊಡುಗೆಯೂ ಹಲವರ ಪಾಲಿಗೆ ದೊಡ್ಡ ಮಟ್ಟಿಗಿನ ಉಪಕಾರ ವಾಗಬಲ್ಲದು ಎಂದರು.

ಲಯನ್ಸ್‍ನಂಥ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯು

(ಮೊದಲ ಪುಟದಿಂದ) ಸಮಾಜಕ್ಕೆ ಅನೇಕ ಯೋಜನೆಗಳನ್ನು ನೀಡುವ ಗುಣದಿಂದಾಗಿಯೇ ಜಾಗತಿಕ ಮಟ್ಟದಲ್ಲಿ ಖ್ಯಾತಿಗೊಂಡ ಸಂಸ್ಥೆಯಾಗಿ ಬೆಳೆದಿದೆ. ಪರೋಪಕಾರ ಮನಸ್ಸಿನಿಂದಾಗಿಯೇ ಲಯನ್ಸ್ ಕ್ಲಬ್ ಸದಸ್ಯರೂ ಸಾಮಾಜಿಕವಾಗಿ ಗುರುತಿ ಸಲ್ಪಟ್ಟಿದ್ದಾರೆ ಎಂದೂ ಡಾ.ಗುರುರಾಜ ಕರಜಗಿ ಹರ್ಷ ವ್ಯಕ್ತಪಡಿಸಿದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪಿ.ಪಿ.ಸೋಮಣ್ಣ ಮಾತನಾಡಿ, ಲಯನ್ಸ್ ಕ್ಲಬ್ ಗಳು ಪ್ರಾಂತೀಯವಾಗಿ ನೂರಾರು ಯೋಜನೆಗಳನ್ನು ಸಮಾಜಕ್ಕೆ ನೀಡಿದ್ದು, ಅಂಗಾಂಗ ದಾನ, ನೇತ್ರದಾನದಂಥ ಯೋಜನೆ ಗಳು ಅನೇಕರಿಗೆ ಪ್ರಯೋಜನ ಕಾರಿಯಾಗಿದೆ. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಲಯನ್ಸ್ ಕ್ಲಬ್ ಸದಸ್ಯರು ಸಂತ್ರಸ್ತರ ನೆರವಿಗೆ ಮಾನವೀಯತೆಯೊಂದಿಗೆ ಧಾವಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ವನಮಹೋತ್ಸವದಂಥ ಯೋಜನೆಗಳು ಹಸಿರ ಪರಿಸರಕ್ಕೆ ಭವಿಷ್ಯದಲ್ಲಿ ಕಾರಣವಾಗಲಿದೆ ಎಂದರು. ಮಾರ್ಚ್ 31 ರೊಳಗಾಗಿ ಕೊಡಗಿನ ಎಲ್ಲಾ ಲಯನ್ಸ್ ಕ್ಲಬ್‍ಗಳು ಕೂಡ ಇತರರಿಗೆ ಉಪಯೋಗವಾಗುವಂಥ ಕರುಣೆಯ ಗೋಡೆ (ವಾಲ್ ಆಫ್ ಕೈಂಡ್‍ನೆಸ್) ಯೋಜನೆಯನ್ನು ಜಾರಿಗೊಳಿಸಿ ತಮಗೆ ಹೆಚ್ಚೆನಿಸಿದ ವಸ್ತುಗಳು, ಬಟ್ಟೆಗಳನ್ನು ಈ ಮೂಲಕ ನಿರ್ಧಿಷ್ಟ ಸ್ಥಳದಲ್ಲಿರಿಸಿ ಅಗತ್ಯವುಳ್ಳವರು ಅದನ್ನು ಪಡೆದುಕೊಳ್ಳುವಲ್ಲಿ ನೆರವಾಗಿ ಎಂದು ಮನವಿ ಮಾಡಿದರು.

ಲಯನ್ಸ್ ಕ್ಲಬ್‍ನ ವಲಯ ಅಧ್ಯಕ್ಷ ಕೆ.ಕೆ. ದಾಮೋದರ್, ಶಾಶ್ವತ್ ಬೋಪಣ್ಣ ತಮ್ಮ ವ್ಯಾಪ್ತಿಯ ಲಯನ್ಸ್ ಕ್ಲಬ್‍ಗಳ ಸಾಧನಾ ವರದಿಯನ್ನು ಮಂಡಿಸಿದರು. ಲಯನ್ ರಾಜ್ಯಪಾಲರ ಪ್ರತಿನಿಧಿಗಳಾದ ಜೆ.ಸಿ.ಶೇಖರ್, ನವೀನ್ ಕಾರ್ಯಪ್ಪ, ಲಯನ್ಸ್ ಸಮ್ಮೇಳನ ಸಮಿತಿ ಅಧ್ಯಕ್ಷ ಬಿ.ಸಿ.ನಂಜಪ್ಪ, ಕಾರ್ಯದರ್ಶಿ ಕೆ.ಮಧುಕರ್, ಖಚಾಂಚಿ ಜೆ.ವಿ.ಕೋಟಿ, ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಲ್.ಮೋಹನ್ ಕುಮಾರ್, ಖಚಾಂಜಿ ಡಿ. ಮಧುಕರ್ ಶೇಟ್, ಸಮ್ಮೇಳನ ಸಮಿತಿ ಸಲಹೆಗಾರರಾದ ಎಂ.ಎ .ನಿರಂಜನ್, ಬಿ.ವಿ.ಮೋಹನ್ ದಾಸ್, ಅನಿತಾ ಸೋಮಣ್ಣ, ಕೊಡಗಿನ 11 ಲಯನ್ಸ್ ಕ್ಲಬ್‍ಗಳ ಅಧ್ಯಕ್ಷರು ವೇದಿಕೆಯಲ್ಲಿದ್ದರು. ಕೇರಳದ ಕಣ್ಣೂರು ಸೇರಿದಂತೆ ವಿವಿಧ ಲಯನ್ಸ್ ಕ್ಲಬ್ ಗಳ ಅಧ್ಯಕ್ಷ, ಕಾರ್ಯದರ್ಶಿ, ಪದಾಧಿಕಾರಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಸಮ್ಮೇಳನ ಸಮಿತಿ ಅಧ್ಯಕ್ಷ ಬಿ.ಸಿ. ನಂಜಪ್ಪ ಸ್ವಾಗತಿಸಿದರು. ಲಯನ್ ಮಧುಕರ್ ಹಾಗೂ ಗೀತಾ ಕಾರ್ಯಕ್ರಮ ನಿರೂಪಿಸಿ, ಅಂಬೆಕಲ್ ನವೀನ್ ಕುಶಾಲಪ್ಪ ವಂದಿಸಿದರು.

ಖ್ಯಾತ ಅಂಕಣಕಾರ ಡಾ.ಗುರುರಾಜ್ ಕರಜಗಿ, ಪರಿಮಳ ಗುರುರಾಜ್ ದಂಪತಿಯನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸ ಲಾಯಿತು. ಸಮ್ಮೇಳನದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಡಿಕೇರಿ ಲಯನ್ಸ್ ಕ್ಲಬ್‍ನ ಮಹಿಳೆಯರಿಂದ ಭಾರತೀಯ ಸಂಸ್ಕøತಿ ಬಿಂಬಿಸುವ ಫ್ಯಾಷನ್ ಶೋ ಗಮನ ಸೆಳೆಯಿತು. ಲಯನ್ಸ್ ಸಂಸ್ಥೆಯ ಕುಟುಂಬ ಸದಸ್ಯರು ಸಂಗೀತ ರಸಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.