*ಗೋಣಿಕೊಪ್ಪ, ಜ. 21: ಬುಡಕಟ್ಟು ಕಾರ್ಮಿಕ ಸಂಘದ ವತಿಯಿಂದ ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಲೈನ್‍ಮನೆ ಕಾರ್ಮಿಕರಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರೆಯಿತು.

ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ಗಪ್ಪು ನೇತೃತ್ವದಲ್ಲಿ

ಸುಮಾರು 200ಕ್ಕೂ ಅಧಿಕ ಮಂದಿ ಹಕ್ಕಿಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.