*ಗೋಣಿಕೊಪ್ಪಲು, ಜ. 21: ಒಂದು ಲಕ್ಷ ಮೂವತ್ತಾರು ಸಾವಿರ ರೂಪಾಯಿ ಅನುದಾನದಲ್ಲಿ ತಿತಿಮತಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಾಣವಾದ ಶೌಚಾಲಯ ಕಟ್ಟಡವನ್ನು ಶಾಲಾ ವಿದ್ಯಾರ್ಥಿಗಳು ಉದ್ಘಾಟಿಸಿದರು.

ತಿತಿಮತಿ ಗ್ರಾ.ಪಂ. ಅನುದಾನದಲ್ಲಿ ಈ ಶೌಚಾಲಯ ನಿರ್ಮಿಸಲಾಗಿದೆ. ಈ ಸಂದರ್ಭ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ಗಣರಾಜ್ಯೋತ್ಸವ ದಿನದ ಕ್ರೀಡಾ ಚಟುವಟಿಕೆಗಳಿಗೆ ಐದು ಸಾವಿರ ರೂಪಾಯಿ ಸಹಾಯಧನವನ್ನು ವಿಜಯಲಕ್ಷ್ಮಿ ಎಸ್ಟೇಟ್ ಮಾಲೀಕ ವಿಜಯಕುಮಾರ್ ನೀಡಿದರು.

ಜಿ.ಪಂ. ಸದಸ್ಯೆ ಪಂಕಜ, ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಮುಖ್ಯ ಶಿಕ್ಷಕಿ ಹೆಚ್.ಎಂ. ಪಾರ್ವತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ, ಸದಸ್ಯ ಚೆಪ್ಪುಡೀರ ರಾಮಕೃಷÀ್ಣ, ಮನುನಂಜಪ್ಪ, ವಿನಯಕುಮಾರ್, ಸಿ.ಆರ್.ಪಿ. ರವಿ ಹಾಜರಿದ್ದರು.