ಗೋಣಿಕೊಪ್ಪಲು, ಜ. 21: ರೂ. 1 ಕೋಟಿ 32 ಲಕ್ಷ ಅನುದಾನದಲ್ಲಿ ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಭೂಮಿ ಪೂಜೆ ನೆರವೇರಿಸಿದರು. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ದೇಶದ ನಡುವೆ ಉತ್ತಮ ಸಂಪರ್ಕ ಬೆಸೆಯಲು ಸಾಧ್ಯವಿದೆ. ಸ್ಥಳೀಯರಿಗೆ ವ್ಯಾಪಾರ, ಉದ್ಯಮ ಸೇರಿದಂತೆ ಇತರ ಚಟುವಟಿಕೆಗಳಿಗೆ ಸುಗಮ ಹಾದಿ ದೊರಕಲಿದೆ. ಈ ಬಾರಿ ಬಿಜೆಪಿ ಸರ್ಕಾರ ರಸ್ತೆ ಕಾಮಗಾರಿಗಳು ಸೇರಿದಂತೆ ವಿವಿಧ ಅಭಿವೃದ್ಧಿಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದೆ. ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಅನುದಾನವನ್ನು ಪರಿಗಣಿಸಿದರೆ
(ಮೊದಲ ಪುಟದಿಂದ) ಬಿಜೆಪಿಯ ಈ ನೂತನ ಸರ್ಕಾರ ರಚನೆಗೊಂಡು ಒಂದು ವರ್ಷದೊಳಗೆ ಬಹುಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದೆ ಎಂದು ಸರ್ಕಾರದ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಬಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಕೊರಕೋಟು ಅಯ್ಯಪ್ಪ ರಸ್ತೆ ಅಭಿವೃದ್ಧಿಗೆ ರೂ. 10 ಲಕ್ಷ, ವೆಸ್ಟ್ ನೆಮ್ಮಲೆ ತೆರಾಲು ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 20ಲಕ್ಷ, ವೆಸ್ಟ್ ನೆಮ್ಮಲೆ ನೆಲ್ಲಂದಿ ತೋಡು ಸೇತುವೆ ದುರಸ್ತಿಗೆ ರೂ. 10 ಲಕ್ಷ, ತಾವಳಗೇರಿ ಮಹಿದಂಡ, ಮಚ್ಚಮಾಡ ಕುಟುಂಬಸ್ಥರ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ತಾವಳಗೇರಿ ಬೆಳ್ಳೂರು ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಚೊಟ್ಟೆಯಂಡಮಾಡ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ತಾವಳಗೇರಿ ಒಂಟಿಯಂಗಡಿಯಿದ ಟಿ. ಶೆಟ್ಟಿಗೇರಿಗೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ತಾವಳಗೇರಿ ಪಟ್ಟಚಾರೀರ, ನೂರೇರ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 4.90 ಲಕ್ಷ, ಈಸ್ಟ್ ನೆಮ್ಮಲೆ ಅಯ್ಯಂಗೇರಿ ಪಟ್ಟಂದೆಲಾಡಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 4.90, ವೆಸ್ಟ್ ನೆಮ್ಮಲೆ ಈಶ್ವರ ದೇವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 4.50 ಲಕ್ಷ, ವೆಸ್ಟ್ ನೆಮ್ಮಲೆ ತೆಂಬರೆ ಕೇಂಬುಕೊಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 4.90 ಲಕ್ಷ, ಹರಿಹರ ತೀತಿರ, ಬಾಚೀರ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 4.80 ಲಕ್ಷ, ಟಿ.ಶೆಟ್ಟಿಗೇರಿ ಗ್ರಾ.ಪಂ. ಟಿ. ಶೆಟ್ಟಿಗೇರಿ ವಗರೆ ಉಳುವಂಗಡ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 4.90 ಲಕ್ಷ, ವೆಸ್ಟ್ ನೆಮ್ಮಲೆ ಕುಂದಂಗೊಡು ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 4.90 ಲಕ್ಷ, ನಾಲ್ಕೇರಿ ಮುಖ್ಯ ರಸ್ತೆಯಿಂದ ಕೊಟ್ರಮಾಡ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 4.90 ಲಕ್ಷ, ಟಿ.ಶೆಟ್ಟಿಗೇರಿ ವಗರೆ ಮುಖ್ಯ ರಸ್ತೆ ಅಭಿವೃದ್ಧಿಗೆ ರೂ. 4.90 ಲಕ್ಷ, ಈಸ್ಟ್ ನೆಮ್ಮಲೆ ಚಂಗುಲಂಡ ಬಾದುಮಂಡ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 4.90 ಲಕ್ಷ, ವೆಸ್ಟ್ ನೆಮ್ಮಲೆ ವಾಡೆಮತ್ಸ್ತೋಡು ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 4.90 ಲಕ್ಷ, ವೆಸ್ಟ್ ನೆಮ್ಮಲೆ ಬಂಗಂಕೊಲ್ಲಿ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಟಿ. ಶೆಟ್ಟಿಗೇರಿ ಬೀರುಗ ಚಂಗುಲಂಡ ಸಂಪರ್ಕ ರಸ್ತೆಗೆ ರೂ. 8 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 32 ಲಕ್ಷದ ಅನುದಾನದ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ನಿಕಟಪೂರ್ವ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ವಿ.ಎಸ್.ಎಸ್.ಎನ್. ಅಧ್ಯಕ್ಷ ಕರುಂಬಯ್ಯ, ಎ.ಪಿ.ಎಂ.ಸಿ. ಸದಸ್ಯೆ ಬೊಳ್ಳಜೀರ ಸುಶೀಲಾ, ಗ್ರಾ.ಪಂ. ಸದಸ್ಯೆ ಶೈಲಾ, ಪ್ರಮುಖರಾದ ಸಂತೋಷ್, ಬೋಪಣ್ಣ, ರಾಜ, ಅಯ್ಯಪ್ಪ, ಕೋಟ್ರಮಾಡ ಮಂಜು, ಅರುಣ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಇಂಜಿನಿಯರುಗಳಾದ ಸುರೇಶ್, ಸಣ್ಣುವಂಡ ನವೀನ್, ಜಿ.ಪಂ. ಇಂಜಿನಿಯರ್ ಮಹಾದೇವ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ವರದಿ: ಎನ್.ಎನ್. ದಿನೇಶ್