ಮಡಿಕೇರಿ, ಜ. 21: ಹಾಕಿ ಇಂಡಿಯಾದ ವತಿಯಿಂದ ಉತ್ತರ ಪ್ರದೇಶದ ಝಾನ್ಸಿಯಲ್ಲಿ ತಾ. 23 ರಿಂದ ಫೆ. 2ರವರೆಗೆ ಆರಂಭ ಗೊಳ್ಳಲಿರುವ 10ನೇ ರಾಷ್ಟ್ರೀಯ ಎ. ಡಿವಿಜನ್ ಹಾಕಿ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿರುವ ಹಾಕಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಬಹುತೇಕ ಕೊಡಗು ಜಿಲ್ಲೆಯ ಆಟಗಾರರೇ ಹಾಕಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವದು ವಿಶೇಷವಾಗಿದೆ.18 ಆಟಗಾರರ ಪೈಕಿ ಕೊಡಗು ಜಿಲ್ಲೆಯವರು ಇವರೊಂದಿಗೆ ತಂಡದ ವ್ಯವಸ್ಥಾಪಕರು ಹಾಗೂ ಕೋಚ್ ಕೂಡ ಜಿಲ್ಲೆಯವರಾಗಿದ್ದಾರೆ. ಪುಲಿಯಂಡ ತಿಮ್ಮಣ್ಣ ತಂಡದ ನಾಯಕರಾಗಿದ್ದು; ಇವರ ನೇತೃತ್ವದಲ್ಲಿ ತಂಡ ಪಾಲ್ಗೊಳ್ಳಲಿದೆ. ತಂಡದಲ್ಲಿ ಗೋಲ್‍ಕೀಪರ್ ಆಗಿ ಜಿಲ್ಲೆಯವರಾದ ಶರತ್ ಸೋಮಣ್ಣ ಕೆ.ಪಿ., ಅಲ್ಲಾರಂಡ ಎ. ಅಪ್ಪಣ್ಣ, ಐ.ಇ. ಪಳಂಗಪ್ಪ, ಕೂತಂಡ ಸಿ. ಬೋಪಣ್ಣ, ಚಿರಂತ್ ಸೋಮಣ್ಣ ಎನ್.ಡಿ., ಲಿಖಿತ್ ಬಿ.ಎಂ., ಯತೀಶ್ ಕುಮಾರ್ ಬಿ., ಪವನ್ ಮಡಿವಾಳರ್, ಪೊನ್ನಣ್ಣ ಸಿ.ಎ., ಶಮಂತ್ ಸಿ.ಎಸ್., ಅಚ್ಚಯ್ಯ ಡಿ.ಎಂ., ಮೋಕ್ಷಿತ್ ಉತ್ತಪ್ಪ ಸಿ.ಕೆ., ಬೆಳ್ಳಿಯಪ್ಪ ಪಿ.ಪಿ. ಭಾಗವಹಿಸುತ್ತಿದ್ದಾರೆ. ತನು ನಂಜಪ್ಪ ಕೋಚ್ ಹಾಗೂ ನೀಲೇಶ್ ಕೆ.ಎ. ವ್ಯವಸ್ಥಾಪಕರಾಗಿರುವದಾಗಿ ಭಾರತ ತಂಡದ ಕೋಚ್ ಜಿಲ್ಲೆಯ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರು ತಿಳಿಸಿದ್ದಾರೆ.