ಚೆಟ್ಟಳ್ಳಿ, ಜ. 20: ಸೂಫಿ ಶಹೀದ್ ಸಂತರು ಹಾಗೂ ಸೈಯದ್ ಅಸ್ಸಕಾಫ್ ಹೆಸರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎಮ್ಮೆಮಾಡು ಮಖಂ ಉರೂಸ್ ಆಚರಿಸಲಾಗುವುದು ಎಂದು ತಾಜುಲ್ ಉಲಮ ಇಸ್ಲಾಂ ಮುಸ್ಲಿಂ ಜಮಾಅತ್ ಸಮಿತಿಯ ಸದಸ್ಯ ಬಿ.ಯು. ಮಹಮ್ಮದ್ ಅಶ್ರಫ್ ತಿಳಿಸಿದ್ದಾರೆ.

ಉರೂಸ್ ಸಂದರ್ಭ ಸಾರ್ವಜನಿಕ ಸಮ್ಮೇಳನ, ಸಾಮೂಹಿಕ ವಿವಾಹ, ಅನ್ನಸಂತರ್ಪಣೆ, ಮತಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಉದ್ಘಾಟನೆ ಹಾಗೂ ಸಮಾರೋಪದಂದು ಧಾರ್ಮಿಕ ಪಂಡಿತರು, ಉಲಮಾ, ಉಮಾರಗಳು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದು, ಮಾ. 2 ರಂದು ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಾಗವಹಿಸಲಿದ್ದು, ಹಲವು ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು

ಈ ಸಂದರ್ಭ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಅದಿ ಪಿ.ಎ., ಸಹ ಕಾರ್ಯದರ್ಶಿ ರಫೀಕ್, ಸದಸ್ಯರುಗಳಾದ ಉಮ್ಮರ್ ಹಾಜಿ, ಮೊಯ್ದು ಹಾಜರಿದ್ದರು.