ಮಡಿಕೇರಿ, ಜ. 21: ನಗರದ ರಾಣಿಪೇಟೆ ರಸ್ತೆಯು ಗುಂಡಿಗಳಿಂದ ಕೂಡಿದ್ದು, ಇದೀಗ ಗುಂಡಿಗಳನ್ನು ನಗರಸಭೆಯು ಜಲ್ಲಿಕಲ್ಲುಗಳಿಂದ ಮುಚ್ಚಲಾರಂಭಿಸಿದೆ. ಆದರೆ, ಅಪರೂಪಕ್ಕೆ ಕೈಗೊಳ್ಳುವ ಇಂತಹ ಕಾಮಗಾರಿಗೆ ಬೇಕಾಗುವ ಜಲ್ಲಿಕಲ್ಲುಗಳನ್ನು ಈ ರಸ್ತೆಯ ಅಂತ್ಯದಲ್ಲಿ; ರಾಣಿಪೇಟೆಯಿಂದ ಕಾವೇರಿ ಹಾಲ್‍ಗೆ ತೆರಳುವ ಕೊಂಚ ಕಷ್ಟದ ತಿರುವಿನಲ್ಲಿಯೇ ಇಡಲಾಗಿದೆ. ರಸ್ತೆ ಬದಿಯಲ್ಲಿ ಜಲ್ಲಿಕಲ್ಲಿನ ರಾಶಿ ಹಾಕÀಲಾಗಿದ್ದು, ಅರ್ಧ ಭಾಗ ರಸ್ತೆಯ ಮೇಲೆ ಬಿದ್ದಿರುತ್ತದೆ.