*ಗೋಣಿಕೊಪ್ಪಲು, ಜ. 21: ಬಲ್ಯಮಂಡೂರು ಗ್ರಾ.ಪಂ. ವ್ಯಾಪ್ತಿಯ ತೂಚಮಕೇರಿ ಗ್ರಾಮದಲ್ಲಿ ನೀರಿನ ಯೋಜನೆಯಡಿಯಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ನೆರವೇರಿಸಿದರು.
ಜಿ.ಪಂ. ಅನುದಾನದ ರೂ. 8 ಲಕ್ಷದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಟ್ಯಾಂಕ್ ನಿರ್ಮಾಣದ ಕಾಮಗಾರಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಖುಷಿ, ಸದಸ್ಯೆ ಪ್ರೀತ್ ಪೆÇನ್ನಪ್ಪ, ಪ್ರಮುಖರಾದ ಪೆಮ್ಮಂಡ ಅರುಣ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.