ಮಡಿಕೇರಿ, ಜ. 20: ವೈಜ್ಞಾನಿಕ ಕೇಂದ್ರವೊಂದು ಊರಿನಲ್ಲಿರುವುದು ಊರಿನ ಬೆಳಕು ಎಂಬದು ನಿಸ್ಸಂಶಯ. ಕಾರಣ, ವಿಜ್ಞಾನವೇ ಮಾನವನನ್ನು ಸುಸಂಸ್ಕøತನನ್ನಾಗಿಸು ವುದು. ನಮ್ಮೂರು ಎಮ್ಮೆಮಾಡು ಒಳ್ಳೆಯ ವೈಜ್ಞಾನಿಕ ಕೇಂದ್ರಗಳಿಂದ ಹೆಸರು ಗಳಿಸಿದ ಊರು. ಇಲ್ಲಿನ ಶಾಲೆಯ ಉತ್ತಮ ಗುಣಮಟ್ಟದ ಶಿಕ್ಷಣದಿಂದ ಇಲ್ಲಿ ಕಲಿತವರು ಇಂದು ಹಲವೆಡೆ ಉತ್ತಮ ಉದ್ಯೋಗದಲ್ಲಿ ದ್ದಾರೆ. ಹಲವು ಪ್ರತಿಭೆಗಳನ್ನು ಈ ಸಮುದಾಯಕ್ಕೆ ಸಮರ್ಪಿಸಿದ ಶಾಲೆ ಅತ್ಯದ್ಭುತ ವಿದ್ಯಾರ್ಥಿಗಳಿಗೆ ದಾರಿ ತೋರಿ ಪೆÇೀಷಿಸಿ ಬೆಳೆಸಿದ ಹೆಮ್ಮೆ ಈ ಶಾಲೆಯದ್ದಾಗಿದೆÉ.

ನನ್ನ ತಂದೆ ಹೇಳಿದ್ದು ನೆನಪಾಗುತ್ತದೆ. ಅವರ ಕಾಲದಲ್ಲಿ ಮಾವಿನ ಮರದ ಕೆಳಗೆ ಕುಳಿತು ಕಲಿತ ಅನುಭವ. ಅಲ್ಲಿಂದ ಪ್ರಾರಂಭವಾದ ನಮ್ಮ ಈ ಊರಿನ ಶೈಕ್ಷಣಿಕ ಯಾತ್ರೆ ಇಂದು ಸುಸಜ್ಜಿತ ಕಟ್ಟಡ, ವಿಶಾಲವಾದ ಮೈದಾನದ ವ್ಯವಸ್ಥೆಯಿಂದ ಅಭಿವೃದ್ಧಿ ಸಾಧಿಸಿದೆ. ಆದರೆ ಇತ್ತೀಚೆಗೆ ಶೈಕ್ಷಣಿಕ ರಂಗದಲ್ಲಿ ಏಳು-ಬೀಳುಗಳು ಕಾಣಲು ಪ್ರಾರಂಭವಾಗಿದೆ. ಪ್ರಗತಿಯಲ್ಲಿ ಕುಂಠಿತ ಗೋಚರಿಸತೊಡಗಿದೆ. ಎಸ್.ಎಸ್. ಎಲ್.ಸಿ ಯಲ್ಲಿನ ಫಲಿತಾಂಶವು ಕ್ಷೀಣಿಸುತ್ತಿದೆ. ಆದರೂ ಊರಿನ ಕಳೆದು ಹೋದ ಪ್ರೌಡಿಮೆಯನ್ನು ತಿರುಗಿ ಪಡೆದು ಒಳ್ಳೆಯ ವಿದ್ಯಾರ್ಥಿಗಳನ್ನು ಈ ಊರಿಗೆ ಶಾಲೆಯ ಮುಖಾಂತರÀ ನೀಡಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಕಳೆದೆರಡು ವಷರ್Àಗಳಿಂದ ವಿದ್ಯಾರ್ಥಿಗಳು ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಒಂದೊಳ್ಳೆಯ ಸುಸಜ್ಜಿತ ಶಾಲೆ ಇದ್ದರೂ ಒಳ್ಳೆಯ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಒಂದು ರೀತಿಯಲ್ಲಿ ಶೈಕ್ಷಣಿಕವಾಗಿ ಅನಾಥರಾಗಿದ್ದಾರೆ. ಈ ವಷರ್Àದ ಕೊನೆಯ ಪರೀಕ್ಷೆಗಳು ಸಮೀಪಿಸುತ್ತಿದ್ದರೂ ಇನ್ನೂ ಒಳ್ಳೆಯ ಪಾಠವನ್ನೇ ಕೇಳದೆ ದುಃಖದಲ್ಲಿದ್ದಾರೆ. ಪ್ರೌಢಶಾಲೆಯಲ್ಲಿ 174 ಮಕ್ಕಳಿಗೆ ಒಬ್ಬರೇ ಶಿಕ್ಷಕರು ಎಲ್ಲ ವಿಷಯಗಳ ಪಾಠ ಮಾಡುವ ಸ್ಥಿತಿ ಒದಗಿದೆ.

ಊರಿನ ಹಿರಿಯರ ಶ್ರಮದಿಂದ ಬೆಳೆದ ಶಾಲೆಯು ಈ ಸ್ಥಿತಿಗೆÉ ತಲುಪಿರುವುದು ನೋಡಲು ದುಃಖವೆನಿಸುತ್ತಿದೆ.

ನಾಳೆಯ ಸಮಾಜದ ನಾಯಕರಾಗಿ, ಸೇವಕರಾಗಿ, ಒಳ್ಳೆಯ ಪ್ರಜೆಗಳಾಗಿ ಬೆಳೆಯಬೇಕಾದ ವಿದ್ಯಾರ್ಥಿಗಳ ಬದುಕಿನೊಂದಿಗೆ ಅಧಿಕಾರಿಗಳು ಚೆಲ್ಲಾಟವಾಡಬಾರದು. ಅವರಿಗೆ ಬೇಕಾದ ಸೌಕರ್ಯ ನೀಡದೆ ಇರುವಾಗ ಇಲ್ಲೊಂದು ದೊಡ್ಡ ಮಟ್ಟದ ಪೀಳಿಗೆಯು ಸಂಪೂರ್ಣ ವಿದ್ಯಾ ವಂಚಿತರಾಗುತ್ತದೆ. ಸಂಬಂಧಪಟ್ಟ ಶಿಕ್ಷಣ ಇಲಾಖೆಯವರು ಕಣ್ಣು ತೆರೆಯಬೇಕು.

ಆದ್ದರಿಂದ ದಯವಿಟ್ಟು ಅತೀ ಶೀಘ್ರವಾಗಿ ಇಲ್ಲಿಯ ಶಾಲೆಯ ಕಡೆ ಗಮನ ವಹಿಸಿ ಬೇಗನೇ ಇಲ್ಲಿಗೆ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಉತ್ತಮ ವಿಜಯಕ್ಕಾಗಿ ಸಹಕರಿಸ ಬೇಕು. ಬೇಗನೇ ಇಲ್ಲಿಗೆ ಅಗತ್ಯವಿರುವ ಶಿಕ್ಷಕರನ್ನು ನೇಮಿಸಿ ನಮ್ಮ ನಾಡಿನ ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ಸಹಕರಿಸಬೇಕಾಗಿ ವಿನಂತಿ.

-ಫಾರೂಕ್ ಎಮ್ಮೆಮಾಡು